ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ತನಿಖೆ ಮುಂದುವರೆದಿದ್ದು ಇದೀಗ ಎಂಟು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಹತ್ಯೆ ಪ್ರಕರಣದಲ್ಲಿ ಖಲಂದರ್ ಶಾಫಿ, ಅಬ್ದುಲ್ ಸಫ್ವಾನ್, ನಿಯಾಜ್, ಮಹಮ್ಮದ್ ಮುಜಾಮಿಲ್, ರಂಜಿತ್, ಆದಿಲ್ ಮೆಹ್ರೂಪ್, ರಿಜ್ವಾನ್ ನಾಗರಾಜ್ ಬಂಧಿತ ಆರೋಪಿಗಳು.
ಆರೋಪಿಗಳ ಬಗ್ಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿ ೨೦೨೩ರಲ್ಲಿ ಸಫ್ವಾನ್ ಮೇಲೆ ಸುಹಾಸ್ ನಿಂದ ಮಾರಣಾಂತಿಕ ಹಲ್ಲೆಯಾಗುತ್ತದೆ. ನಂತರ ಸುಹಾಸ್ ನ ವಿಚಾರದಲ್ಲಿ ಸಫ್ವಾನ್ ಗೆ ಭಯವಿರುತ್ತದೆ. ಈ ಹಿನ್ನೆಲೆ ಸುಹಾಸ್ ನನ್ನು ಕೊಲೆ ಮಾಡಲು ಸಂಚು ರೂಪಿಸಿ ಫಾಜಿಲ್ ನ ತಮ್ಮ ಆದಿಲ್ ನನ್ನು ಸಂಪರ್ಕಿಸಿ ಸ್ಕೆಚ್ ಹಾಕ್ತಾರೆ. ಸಫ್ವಾನ್ ಈ ಕೊಲೆ ಮಾಡಲು ಐದು ಲಕ್ಷ ರೂ. ತಂಡಕ್ಕೆ ನೀಡುತ್ತಾನೆ.
ಕಾಂಟ್ರಾಕ್ಟ್ ಕಿಲ್ಲಿಂಗ್ ನಡೆಸಲು ಚಿಕ್ಕಮಗಳೂರಿನಿಂದ ನಿಯಾಜ್ ನ ಸ್ನೇಹಿತರಾದ ರಂಜಿತ್ ಮತ್ತು ನಾಗರಾಜ್ ನನ್ನು ನೇಮಿಸುತ್ತಾರೆ. ಇವರು ಸಫ್ವಾನ್ ನ ಮನೆಯಲ್ಲೇ ಎರಡು ದಿನ ವಾಸ ಮಾಡಿ ಸುಹಾಸ್ ನ ಚಲನವಲನ ಗಮನಿಸಿಕೊಂಡಿದ್ದಾರೆ. ನಂತರ ಪ್ಲ್ಯಾನಿಂಗ್ ಪ್ರಕಾರವೇ ಹತ್ಯೆ ನಡೆಸಿದ್ದಾರೆ. ಬುರ್ಖಾಧಾರಿ ಮಹಿಳೆ ನಿಯಾಜ್ ನ ಸಂಬಂಧಿ ಎಂಬ ಮಾಹಿತಿ ಲಭಿಸಿದ್ದು ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.

