ಕಾರ್ಕಳ: ಹಿಂದುತ್ವಕ್ಕಾಗಿಯೇ ನಿಸ್ವಾರ್ಥವಾಗಿ ಬದುಕಿದ್ದ ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಎಂದು ಬಿಂಬಿಸಲು ವಿವಿಧ ರೀತಿಯಲ್ಲಿ ಹುನ್ನಾರ ನಡೆಯುತ್ತಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಸುಹಾಸ್ ನಂಥವರ ಕೊಲೆಗೆ ಸಂಚು ರೂಪಿಸುವ ಪಿಎಫ್ಐ ಉಗ್ರರಿಗೆ ಸಂಪುಟ ಉಪಸಮಿತಿ ಶಿಫಾರಸ್ಸಿನ ಮೇರೆಗೆ ಪ್ರಕರಣ ವಾಪಾಸ್ಸು ಭಾಗ್ಯ ನೀಡಲಾಗಿದೆ ಎಂದು ಟೀಕಿಸಿದರು.
ಪೊಲೀಸ್ ವ್ಯವಸ್ಥೆ, ಸ್ಥಳೀಯ ಆಡಳಿತ, ಕುತಂತ್ರಿ ರಾಜಕಾರಣಿಗಳು ಭಾಷಣದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಸುಹಾಸ್ ಗೆ ರೌಡಿಶೀಟರ್ ಹಣೆಪಟ್ಟಿ ಕಟ್ಟುತ್ತಿದ್ದಾರೆ, ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

