ಮೇಷ: ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಸಂಬಂಧಿಕರ ಜೊತೆ ಕಳೆದ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಅಮೂಲ್ಯ ಸಮಯ ವ್ಯರ್ಥವಾಗಬಹುದು.
ವೃಷಭ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆ. ಹಳೆಯ ಸ್ನೇಹಿತ ವ್ಯಾಪಾರದಲ್ಲಿ ಲಾಭ ಗಳಿಸಲು ಸಲಹೆ ನೀಡಬಹುದು. ಮದುವೆ ಆದರೆ ಉತ್ತಮ ಘಟ್ಟ ತಲುಪುತ್ತೀರಿ.
ಮಿಥುನ: ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಕೆಂಪು ವೈನ್ ತೆಗೆದುಕೊಳ್ಳಿ. ಹಣ ಖರ್ಚು ಮಾಡುವ ಅಗತ್ಯವಿಲ್ಲ. ಕೆಲಸದ ಒತ್ತಡ ಮನಸ್ಸನ್ನು ಆವರಿಸುತ್ತದೆ.
ಕರ್ಕಾಟಕ: ಹಣದ ಪರಿಸ್ಥಿತಿ ದಿನದ ನಂತರ ಸುಧಾರಿಸುತ್ತದೆ. ನೀವು ಪ್ರೀತಿಯಲ್ಲಿದ್ದೀರಿ. ನಿಮ್ಮ ವೃತ್ತಿಪರ ಶಕ್ತಿಯನ್ನು ಬಳಸಿ.
ಸಿಂಹ: ನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು. ನಿಮ್ಮ ಕೋಪ ನಿಮ್ಮನ್ನು ಸುಡುವ ಬದಲು ನೀವೇ ಅದನ್ನು ಸುಟ್ಟುಬಿಡಿ. ಸಂಗಾತಿ ಇಡೀ ದಿನ ನಿಮ್ಮ ಬಗ್ಗೆ ಯೋಚಿಸುತ್ತಾರೆ.
ಕನ್ಯಾ: ತಾಳ್ಮೆ ಕಳೆದುಕೊಳ್ಳುವುದು ಬೇಡ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಪತ್ನಿಯ ಸಾಧನೆಯನ್ನು ಶ್ಲಾಘಿಸಿ.
ತುಲಾ: ಬಿಡುವಿನ ಸಮಯ ನಿಸ್ವಾರ್ಥ ಸೇವೆಯಲ್ಲಿ ವಿನಿಯೋಗಿಸಿ. ಕುಟುಂಬಕ್ಕೆ ಸಂತೋಷದ ದಿನ. ಸಂಗಾತಿಯ ಜೊತೆಗಿನ ಹಳೆಯ ನೆನಪು ಮರುಕಳಿಸಬಹುದು.
ವೃಶ್ಚಿಕ: ಆರೋಗ್ಯ ಚೆನ್ನಾಗಿರುತ್ತದೆ. ಅಮೂಲ್ಯ ವಸ್ತುಗಳ ಬಗ್ಗೆ ಗಮನ ಹರಿಸಿ. ಸ್ನೇಹಿತರ ಸಲಹೆ ಉತ್ತಮ ಲಾಭ ತರುತ್ತದೆ.
ಧನಸ್ಸು: ಮಸಾಲೆಯುಕ್ತ ಆಹಾರ ತಪ್ಪಿಸಿ. ಹೆತ್ತವರ ಆರೋಗ್ಯದ ಬಗ್ಗೆ ಗಮನ ಹರಿಸಿ. ಇಂದು ಮೊಬೈಲ್ ನಲ್ಲಿ ಚಲನಚಿತ್ರ ವೀಕ್ಷಿಸುತ್ತೀರಿ.
ಮಕರ: ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ.
ಕುಂಭ: ಸಂತೋಷ ಹಂಚಿಕೊಳ್ಳುವ ಮೂಲಕ ಅರಳುತ್ತದೆ. ಹಣದ ಲಾಭ ಪಡೆಯಬಹುದು. ಮಕ್ಕಳ ಸಾಧನೆಗಳಿಂದ ಹೆಮ್ಮೆ ಪಡುತ್ತೀರಿ.
ಮೀನ: ವಿಶ್ರಾಂತಿ ಪಡೆಯಲು ಸಾಧ್ಯವಾಗುವ ದಿನ. ತೈಲದಿಂದ ದೇಹಕ್ಕೆ ಮಸಾಜ್ ಮಾಡಿ. ಪ್ರೀತಿಯಲ್ಲಿ ವಿವೇಚನಾ ಶಕ್ತಿಯನ್ನು ಬಳಸಿ.


