ಮಂಗಳೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರು ಪ್ರಯಾಣಿಕರ ನಡುವೆ ಗಲಾಟೆ ನಡೆದಿದೆ. ಗಲಾಟೆ ಅತಿರೇಕಕ್ಕೆ ಹೋದಾಗ ರೈಲಿನ ತುರ್ತು ಸರಪಳಿಯನ್ನು ಎಳೆದು ರೈಲು ನಿಲ್ಲಿಸಿದ ಘಟನೆ ಸುಬ್ರಹ್ಮಣ್ಯದಿಂದ ಹೊರಟ ಪ್ಯಾಸೆಂಜರ್ ರೈಲಿನಲ್ಲಿ ನಡೆದಿದೆ.
ಇವರಿಗೆ ರೈಲ್ವೇ ರಕ್ಷಣಾ ಪಡೆ ಸಾವಿರದ ಐನೂರು ರುಪಾಯಿ ದಂಡ ವಿಧಿಸಿದೆ. ರೈಲು ಬಂಟ್ವಾಳ ಬಳಿ ತಲುಪಿದಾಗ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ರೈಲಿನಲ್ಲಿ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದರು ಕೂಡಾ.
ಆ ಸಂದರ್ಭ ರೈಲ್ವೇ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಮಾಹಿತಿ ಪಡೆದರು. ನಂತರ ಮಂಗಳೂರು ಜಂಕ್ಷನ್ ತಲುಪಿದ ನಂತರ ಅಧಿಕಾರಿಗಳು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.


