ಬೆಂಗಳೂರು: ರಾಜ್ಯದ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಸರ್ಕಾರ ಶುಭಸುದ್ದಿಯೊಂದನ್ನು ನೀಡಿದೆ. ಅತಿಥಿ ಶಿಕ್ಷಕರ ಮತ್ತು ಉಪನ್ಯಾಸಕರ ಗೌರವ ಸಂಭಾವನೆಯನ್ನು ಎರಡು ಸಾವಿರಗಳಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮುಂದಿನ ಆದೇಶದವರೆಗೆ ಈ ಪರಿಷ್ಕೃತ ಗೌರವ ಸಂಭಾವನೆ ಜಾರಿಯಲ್ಲಿರಲಿದೆ. ಈ ಹಿಂದೆ ಸರ್ಕಾರ ಶಾಲಾ ಅತಿಥಿ ಶಿಕ್ಷಕರಿಗೆ ಹತ್ತು ಸಾವಿರ ಗೌರವ ಸಂಭಾವನೆ ನಿಗದಿಪಡಿಸಿತ್ತು. ಈ ಮೊತ್ತವನ್ನು ಹೆಚ್ಚಿಸಬೇಕೆಂದು ಅನೇಕ ಸಮಯದಿಂದಲೂ ಬೇಡಿಕೆ ಇತ್ತು. ಇದೀಗ ಆ ಬೇಡಿಕೆಗೆ ಸರ್ಕಾರ ಆಸ್ತು ಎಂದಿದೆ.
ಕಾಲೇಜಿನ ಅತಿಥಿ ಉಪನ್ಯಾಸಕರಿಗೂ ಈ ಮೊದಲು ಹನ್ನೆರಡು ಸಾವಿರ ಸಂಬಳ ನಿಗದಿಯಾಗಿತ್ತು. ಇದೀಗ ಹದಿನಾಲ್ಕು ಸಾವಿರ ಆಗಿದೆ. ಮುಂದಿನ ಆದೇಶದವರೆಗೂ ಈ ಪರಿಷ್ಕೃತ ಗೌರವ ಸಂಭಾವನೆಯೂ ಜಾರಿಯಲ್ಲಿರಲಿದೆ.

