ಬ್ರಹ್ಮಾವರ: ಮೀನುಗಾರಿಕಾ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಲೆಂದು ಬಲೆ ಸಾರಿ ಮಾಡುತ್ತಿದ್ದಾಗ ಕುಸಿದು ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲ್ಲೂಕಿನ ಹಂಗರಕಟ್ಟೆಯಲ್ಲಿ ನಡೆದಿದೆ.
ಮೃತರನ್ನು ಗೋಪಾಡಿ ಗ್ರಾಮದ ಗೋವಿಂದ ಎಂದು ತಿಳಿದುಬಂದಿದೆ. ಚಾಮುಂಡೇಶ್ವರಿ ಬೋಟ್ ನಲ್ಲಿ ಗೋವಿಂದ ಅವರು ಕೆಲಸ ಮಾಡುತ್ತಿದ್ದು 15 ದಿನಗಳಿಗೊಮ್ಮೆ ರಜೆಯಲ್ಲಿ ಮನೆಗೆ ಬರುತ್ತಿದ್ದರು. ಮಂಗಳವಾರ ಮೀನು ಹಿಡಿಯಲು ತೆರಳಲು ತಯಾರಿ ಸಲುವಾಗಿ ಬಲೆ ಸರಿ ಮಾಡುತ್ತಿರುವಾಗ ಕುಸಿದುಬಿದ್ದಾಗ ಸಹ ಕೆಲಸಗಾರರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

