ಕುಂದಾಪುರ: ನನ್ನ ಆಸ್ತಿ, ಭೂಮಿಗಾಗಿ ನನ್ನನ್ನು ಕೊಲೆ ಮಾಡಬಹುದು. ನನಗೆ ಮತ್ತು ನನ್ನ ದೊಡ್ಡ ಮಗಳಿಗೆ ರಕ್ಷಣೆ ಬೇಕು ಎಂದು ಕೋರಿ ಚೈತ್ರಾ ಕುಂದಾಪುರ ಅವರ ವಿರುದ್ಧ ಸ್ವತಃ ಅವರ ತಂದೆಯಾದ ಬಾಲಕೃಷ್ಣ ನಾಯಕ್ ಅವರು ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಅವರು `ನಾನು ಮದುವೆಗೆ ಬಾರದೆ ಇದ್ದಲ್ಲಿ ನನ್ನನ್ನು ಹಾಗೂ ನನ್ನ ಹಿರಿಯ ಮಗಳು ಗಾಯತ್ರಿಯನ್ನು ಭೂಗತ ದೊರೆಗಳಿಗೆ ಸುಫಾರಿ ನೀಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಕುಂದಾಪುರದಲ್ಲಿರುವ ನನಗೆ ಸೇರಿದ ಆಸ್ತಿಯನ್ನು ಯಾವ ರೀತಿಯಲ್ಲಿ ನನ್ನ ಹೆಸರಿಗೆ ಮಾಡಿಕೊಳ್ಳಬೇಕೆಂದು ಗೊತ್ತಿದೆ ಎಂದು ಬೆದರಿಕೆ ಹಾಕಿದ್ದಾಳೆ. ಜೊತೆಗೆ ಈಕೆಗೆ ಭೂಗತ ದೊರೆಗಳ ಸಂಪರ್ಕವಿದ್ದು ಆಕೆ ಯಾವುದೇ ಹೇಯ ಕೃತ್ಯ ಮಾಡಲು ಹೇಸುವವಳಲ್ಲ. ಈಗಾಗಲೇ ನಾನು ಮೃತಪಟ್ಟಿದ್ದೇನೆಂದು ಹೇಳಿದ್ದಾಳೆ ಎಂದು ಉಲ್ಲೇಖ ಮಾಡಿದ್ದಾರೆ.
ಚೈತ್ರಾ ಅವರು ತಮ್ಮ ತಂದೆಯನ್ನು ಕೊಲೆ ಮಾಡಲು ಸುಪಾರಿ ಕೊಟ್ರಾ ಎನ್ನುವಂತಹ ಪ್ರಶ್ನೆ ಕೂಡಾ ಕೇಳಿ ಬರುತ್ತಿದೆ. ಆಸ್ತಿಗಾಗಿ ಚೈತ್ರಾ ಯಾವ ಹೇಯ ಕೃತ್ಯವನ್ನು ಬೇಕಾದರೂ ಮಾಡಬಹುದು ಎಂದು ತಂದೆ ಬಾಲಕೃಷ್ಣ ನಾಯಕ್ ಅವರು ಗಂಭೀರ ಆರೋಪ ಮಾಡಿದ್ದಾರೆ.

