ಉಡುಪಿ: ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯಿಂದ ಪಿಎಫ್ ಆ್ಯಂಡ್ ಪೆನ್ಶನ್ ಅದಾಲತ್ ಮೇ 27ರಂದು ಬೆಳಿಗ್ಗೆ ಹತ್ತು ಗಂಟೆಗೆ ನೀಲಾವರದ ಕುಂಜಾಲು ಪ್ರಕೃತಿ ಲೈಫ್ ಸೈನ್ಸ್ ನಲ್ಲಿ ನಡೆಯಲಿದೆ.
ಜಿಲ್ಲೆಯ ಪಿಎಫ್ ಚಂದಾದಾರರು, ಇಪಿಎಫ್ ಪಿಂಚಣಿದಾರರು, ಪಿಎಫ್ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಉದ್ಯೋಗದಾತರು, ಟ್ರೇಡ್ ಯೂನಿಯನ್ ಮುಖಂಡರು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬಹುದು.
ಇದಕ್ಕೆ ಸಂಬಂಧಿಸಿ ಏನಾದರೂ ಮಾಹಿತಿ ಸಿಗಬೇಕಿದ್ದಲ್ಲಿ ಅಥವಾ ಸೌಲಭ್ಯಗಳ ಬಗ್ಗೆ ಅರಿವು ಬೇಕಾದಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


