ಸುಬ್ರಹ್ಮಣ್ಯ: ದ.ಕ ಜಿಲ್ಲೆಯ ಸುಪ್ರಸಿದ್ಧ ಕ್ಷೇತ್ರವಾಗಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಮಿಸುವ ಭಕ್ತರಿಗೆ ಮೇ. 30ರಿಂದ ಬೆಳಿಗ್ಗೆ ಎಂಟು ಗಂಟೆಗೆ ಉಪಾಹಾರ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ.
ಉಪಾಹಾರ ವೇಳಾಪಟ್ಟಿಯಲ್ಲಿ ಉಪ್ಪಿಟ್ಟು, ಅವಲಕ್ಕಿ, ಹೆಸರುಕಾಳು, ಪುಲಿಯೋಗರೆ ಮುಂತಾದ ತಿಂಡಿಗಳು ಇರಲಿದೆ. ದಿನಂಪ್ರತಿ ವಿಭಿನ್ನ ತೆರನಾದ ಉಪಾಹಾರದ ವ್ಯವಸ್ಥೆ ಇರುತ್ತದೆ.
ದೇಗುಲದ ಷಣ್ಮುಖ ಭೋಜನ ಶಾಲೆಯಲ್ಲಿ ಉಪಾಹಾರ ಲಭ್ಯವಿರಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.


