ಮಂಗಳೂರು: ದ.ಕ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಬಂಟ್ವಾಳ ರಹೀಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಏರ್ಪಡಿಸಿದ್ದ ಸುದ್ದಿಗೋಷ್ಠಿ ವೇಳೆ ರಾದ್ದಾಂತ ನಡೆದಿದೆ.
ರಹಿಮಾನ್ ಕೊಲೆಗೆ ಪ್ರಚೋದನಕಾರಿ ಭಾಷಣ ಕಾರಣನಾ ಅಂತ ಪತ್ರಕರ್ತರು ಪ್ರಶ್ನಿಸಿದ್ದಾಗ ಸಚಿವರು ಉತ್ತರಿಸಲು ರೆಡಿಯಾದಾಗ ಕಾಂಗ್ರೆಸ್ ಮುಖಂಡ ಉಸ್ಮಾನ್ ಕಲ್ಲಾಪು ಈ ಕೊಲೆಗೆ ಬಜ್ಪೆ ಚಲೋದಲ್ಲಿ ಮಾಡಿರುವ ಹೇಟ್ ಸ್ಪೀಚೇ ಕಾರಣ ಎಂದಿದ್ದಾರೆ.
ಈ ಸಂದರ್ಭ ಅವರನ್ನು ಹೊರಗೆ ಕಳಿಸುವಂತೆ ಸಚಿವ ದಿನೇಶ್ ಗುಂಡುರಾವ್ ಹೇಳಿದಾಗ ಉಸ್ಮಾನ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ನಿಮ್ಮ ಸಪೋರ್ಟ್ ಬೇಡ. ನ್ಯಾಯ ಬೇಕು ಅಷ್ಟೇ. ಹೊಸ ಪೊಲೀಸ್ ಅಧಿಕಾರಿಯ ಮೇಲೆ ನಂಬಿಕೆಯಿದೆ ಎಂದಿದ್ದಾರೆ.

