ಮಂಗಳೂರು: ಪ್ರಕರಣ ಯಾವುದೇ ಆಗಿರಲಿ. ಆರೋಪಿಗಳಿಗೆ ಯಾರೇ ಆಶ್ರಯ ನೀಡಿದ್ರೂ ಕೂಡಾ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ನೂತನ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಕೆಲವೊಂದು ಪ್ರಕರಣದಲ್ಲಿ ಅಮಾಯಕರನ್ನು ಅರೆಸ್ಟ್ ಮಾಡಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ. ಆರೋಪಿಗೆ ಸಣ್ಣ ಪುಟ್ಟ ಸಹಾಯ ಮಾಡಿದವನೂ ಆರೋಪಿಯಾಗ್ತಾನೆ ಎಂದು ಹೇಳಿದರು.
ಆರೋಪಿಗೆ ಆಹಾರ, ಸುರಕ್ಷತೆ, ಆರ್ಥಿಕ ಸಹಾಯ ಹೀಗೆ ಏನೇ ನೆರವು ನೀಡಿದ್ದಲ್ಲಿ ಆತ ಅದೆಷ್ಟೇ ದೊಡ್ಡ ಜನವಾಗಿರಲಿ, ಪ್ರಭಾವಶಾಲಿಯೇ ಆಗಿರಲಿ ಅವರನ್ನೂ ಬಂಧಿಸ್ತೇವೆ ಎಂದು ಖಡಕ್ ಆಗಿ ಮಾತನಾಡಿದರು.

