ಹೈದರಾಬಾದ್ ನಲ್ಲಿ ನಡೆದ 2025ನೇ ಸಾಲಿನ ಮಿಸ್ ವರ್ಲ್ಡ್ ಕಿರೀಟವನ್ನು ಥೈಲ್ಯಾಂಡ್ ನ ಓಪಲ್ ಸುಚಾತಾ ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ವಿಶ್ವ ಸುಂದರಿ ಪಟ್ಟವನ್ನು ಗೆಲ್ಲುವ ನಿರೀಕ್ಷೆ ಹೊಂದಿದ್ದ ನಂದಿನಿ ರೇಸ್ ನಿಂದ ಹೊರ ಬಿದ್ದಿದ್ದು ಅಗ್ರ ಎಂಟನೇ ಸ್ಥಾನ ಪಡೆಯುವಲ್ಲಿ ವಿಫಲರಾದರು. ಈ ಬಾರಿಯ ವಿಶ್ವಸುಂದರಿ ಸುಚಾತಾ ಅವರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರಂತೆ.
ಆ ನೋವು ನನಗೆ ಮಾತ್ರ ಗೊತ್ತು. ಈಗಲೂ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತೇನೆ. ಮಿಸ್ ವರ್ಲ್ಡ್ ವೇದಿಕೆಗೆ ತಯಾರಿ ನಡೆಸಲು ನನಗೆ ಕೇವಲ ಹದಿನೈದು ದಿನಗಳು ಬೇಕಾಯಿತು ಎಂದು ಹೇಳಿದ್ದಾರೆ.



