ಕೊಲ್ಲೂರು: ಪ್ರಸಿದ್ಧ ಕ್ಷೇತ್ರ ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಾನದಲ್ಲಿ ಈ ವರ್ಷದ ಮೇ ತಿಂಗಳೊಂದರಲ್ಲೇ ಸುಮಾರು ಒಂದು ಕೋಟಿ ನಲ್ವತ್ತು ಲಕ್ಷ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗಿದ್ದು ದಾಖಲೆ ನಿರ್ಮಿಸಿದೆ.
ನಗದು, ಚಿನ್ನಾಭರಣ ಸೇರಿ ಒಟ್ಟು ಕಾಣಿಕೆ ಡಬ್ಬಿಯಲ್ಲಿ ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಹೊರತು ಪಡಿಸಿದರೆ ರಾಜ್ಯದಲ್ಲೇ ಅತೀ ಹೆಚ್ಚು ಆದಾಯ ಸಂಗ್ರಹವಾಗುವ ದೇಗುಲ ಇದಾಗಿದೆ.
ಈ ಬಾರಿ ಜನವರಿ ತಿಂಗಳಿನಿಂದ ಮೇ ತಿಂಗಳವರೆಗೆ ಪ್ರತಿದಿನ ಮೂವತ್ತೂ ಸಾವಿರಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು. ಈ ಹಿನ್ನೆಲೆ ಆದಾಯವೂ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗಿದೆ.

