ಇತ್ತೀಚಿನ ದಿನಗಳಲ್ಲಿ ಪದವಿ ಮುಗಿದಿದ್ರೂ ಸರಿಯಾದ ಉದ್ಯೋಗ ಸಿಗುತ್ತಿಲ್ಲ ಅನ್ನೋ ಚಿಂತೆ ಕಾಡ್ತಾ ಇದ್ರೆ ಅಂಥವರಿಗಾಗಿ ಕೇಂದ್ರ ಸರ್ಕಾರ ಶುಭಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹದಿನಾಲ್ಕು ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಆದಾಯ ತೆರಿಗೆ, ರೈಲ್ವೇ, ಅಂಚೆ ಇತ್ಯಾದಿ ಅನೇಕ ಇಲಾಖೆಗಳಿಗೆ ಎಸ್ಎಸ್ ಸಿ ಸಿಜಿಎಲ್ ಪರೀಕ್ಷೆಯ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜುಲೈ ನಾಲ್ಕು ಕೊನೆಯ ದಿನವಾಗಿದೆ.
ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಶುಲ್ಕ ಕೂಡಾ ಪಾವತಿಸಬೇಕಾಗುತ್ತದೆ. ಎರಡು ಮೂರು ಹಂತದ ಪರೀಕ್ಷೆಯಿದ್ದು ಇದರಲ್ಲಿ ಉತ್ತೀರ್ಣರಾದವರಿಗೆ ಉಳಿದ ಪ್ರಕ್ರಿಯೆಗಳು ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಎಂಭತ್ತೊಂದು ಸಾವಿರಕ್ಕೂ ಅಧಿಕ ಸಂಬಳ ಪಡೆಯುವ ಅವಕಾಶವಿದೆ.

