ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆಯ ಬೆನ್ನಲ್ಲೇ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಸಂಜೆ 5 ಗಂಟೆಯ ನಂತರ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ಸ್ವಿಮ್ಮಿಂಗ್ ಪೂಲ್ ನಂತಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.
ಒಂದು ಕಡೆ ಅವೈಜ್ಞಾನಿಕ ರಸ್ತೆ ಕಾಮಗಾರಿ, ಮತ್ತೊಂದೆಡೆ ಮಳೆಗಾಲಕ್ಕೆ ಬೇಕಾದ ಪೂರ್ವ ತಯಾರಿಗಳಿಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಬ್ರಹ್ಮಾವರದಲ್ಲಿ ಸರ್ವೀಸ್ ರಸ್ತೆಗಾಗಿ ತೆಗೆದಿಟ್ಟ ಹೊಂಡಗಳು ನೀರು ತುಂಬಿಕೊಂಡಿದ್ದು, ಯಾವುದೇ ತಡೆಬೇಲಿ ವ್ಯವಸ್ಥೆ ಇಲ್ಲವಾಗಿದೆ. ಮಹೇಶ್ ಆಸ್ಪತೆಯ ಮುಂಭಾಗ ಪ್ರತಿದಿನ ನೂರಾರು ಮಕ್ಕಳು ಓಡಾಟ ಮಾಡುತ್ತಿದ್ದು, ಮುನ್ನೆಚರಿಕಾ ವ್ಯವಸ್ಥೆಯ ಆಗತ್ಯವಿದೆ.


