ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಾಗಿದೆ. ಈ ಮಳೆಗೆ ಏನಾದರೊಂದು ಬಿಸಿಬಿಸಿ ತಿಙಡಿ ತಿನ್ನುವ ಬಯಕೆ ಸಹಜವಾಗಿ ಆಗೇ ಆಗುತ್ತೆ. ಈ ಮಳೆಗೆ ಬಿಸಿಬಿಸಿ ತಿಂಡಿಯ ಜೊತೆಗೆ ಚಹಾ ಅಥವಾ ಕಾಪಿ ಸವಿಯುತ್ತಿದ್ದರೆ ಆ ಸ್ವಾದನೇ ಬೇರೆ. ಈ ಮಳೆಗೆ ನಾವು ಸವಿಯುವ ಅನೇಕ ಸ್ನ್ಯಾಕ್ಸ್ ಗಳಲ್ಲಿ ಬಾಳೆಕಾಯಿ ಬಜ್ಜಿ ಕೂಡಾ ಒಂದು.
ಇದನ್ನು ಹೊಟೇಲ್ ನ ರುಚಿಯೇ ಬರುವಂತೆ ಮನೆಯಲ್ಲೇ ಅತ್ಯಂತ ಕಡಿಮೆ ಐಟಮ್ಸ್ ಬಳಸಿ ರೆಡಿ ಮಾಡಬಹುದು. ಈ ಬಾಳೆಕಾಯಿ ಬಜ್ಜಿ ಮಾಡಲು ಕಡಲೆಹಿಟ್ಟು, ಬಾಳೆಕಾಯಿ, ಅಕ್ಕಿಹಿಟ್ಟು, ಖಾರದಪುಡಿ, ಈರುಳ್ಳಿ,ಉಪ್ಪು, ಜೀರಿಗೆ ಮತ್ತು ಕರಿಯಲು ಎಣ್ಣೆ ಇಷ್ಟು ಸಾಮಾಗ್ರಿಗಳು ಬೇಕಾಗುತ್ತದೆ.
ಮಾಡುವ ವಿಧಾನವೆಂದರೆ ಮೊದಲಿಗೆ ಬಾಳೆಕಾಯಿ ಸಿಪ್ಪೆ ತೆಗೆದು ಬಜ್ಜಿಗೆ ಬೇಕಾಗುವ ರೀತಿಯಲ್ಲಿ ತೆಳುವಾಗಿ ಸ್ಲೈಸ್ ಮಾಡಿಕೊಂಡು ನೀರಲ್ಲಿ ಹಾಕಿಟ್ಟುಕೊಳ್ಳಬೇಕು. ನಂತರ ಅಗಲವಾದ ಬೌಲ್ ನಲ್ಲಿ ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿ ಹಾಕಿ ನೀರು ಕಲಸಿ ಮಿಶ್ರಣ ತಯಾರಿಸಿ ಪೇಸ್ಟ್ ಮಾಡಿಕೊಳ್ಳಬೇಕು.
ಸ್ವಲ್ಪ ಹೊತ್ತಿನ ಬಳಿಕ ಕಟ್ ಮಾಡಿಟ್ಟ ಬಾಳೆಕಾಯಿ ಸ್ಲೈಸ್ ಗಳನ್ನು ಅದರಲ್ಲಿ ಮುಳುಗಿಸಿ ತೆಗೆದು ಎಣ್ಣೆಯಲ್ಲಿ ಗೋಲ್ಡ್ ಕಲರ್ ಬರೋವರೆಗೂ ಫ್ರೈ ಮಾಡಿದ್ರೆ ಬಾಳೆಕಾಯಿ ಬಜ್ಜಿ ಸವಿಯಲು ಸಿದ್ಧ. ಕರಾವಳಿಯಲ್ಲಿ ಇದನ್ನು ಬಾಳೆಕಾಯಿ ಪೋಡಿ ಎಂದು ಕೂಡಾ ಕರೆಯುತ್ತಾರೆ.

