ಮಂಗಳೂರು: ಯುವಕನೋರ್ವನಿಗೆ ಎದೆನೋವು ಶುರುವಾಗಿ ಕೊನೆಗೆ ಆತ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಮಂಗಳೂರಿನ ದೇರಳಕಟ್ಟೆಯ ಕಾನೆಕೆರೆ ಎಂಬಲ್ಲಿ ನಡೆದಿದೆ.
ದೇರಳಕಟ್ಟೆ ಕಾನೆಕೆರೆ ನಿವಾಸಿ ಶಿವಾನಂದ ರೆಡ್ಡಿ ಎಂಬವರ ಪುತ್ರ ವಿನಯ್ ಕುಮಾರ್ ಮೃತಪಟ್ಟ ದುರ್ದೈವಿ. ಇವರು ಈ ಹಿಂದೆ ದಪ್ಪ ಶರೀರವನ್ನು ಹೊಂದಿದ್ದು ಡಯೆಟ್ ಮಾಡಿ ತೂಕವನ್ನು ಇಳಿಸಿದ್ದರು.
ಇದ್ದಕಿದ್ದಂತೆ ಇಂದು ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು ಕೆಲ ಕ್ಷಣಗಳಲ್ಲೇ ಸಾವನ್ನಪ್ಪಿದ್ದಾರೆ. ಹೆತ್ತವರು, ಸೋದರಿಯರನ್ನು ಅಗಲಿದ ಮೃತ ವಿನಯ್ ಸಾವಿಗೆ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

