ಗಾಂಧೀನಗರ: ಅಹಮದಾಬಾದ್ ನಲ್ಲಿ ಮೊನ್ನೆ ನಡೆದ ವಿಮಾನ ದುರಂತ ನಡೆದ ಕೆಲವೇ ಕ್ಷಣಗಳಲ್ಲಿ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಆ ವೀಡಿಯೋ ಚಿತ್ರೀಕರಣ ಮಾಡಿದ ಯುವಕ ಯಾರೆಂದು ಬಹಿರಂಗವಾಗಿದೆ.
ಹದಿನೇಳು ವರ್ಷದ ಆರ್ಯನ್ ಅಸ್ಸಾರಿ ಎಂಬಾತ ವಿಮಾನ ಪತನದ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಆತ ವಿಮಾನ ಅತ್ಯಂತ ಹತ್ತಿರದಿಂದ ಹೋಗುತ್ತಿತ್ತು. ಅದನ್ನು ಸ್ನೇಹಿತರಿಗೆ ತೋರಿಸುವ ಉದ್ದೇಶದಲ್ಲಿ ವೀಡಿಯೋ ಮಾಡಿದ್ದೆ. ಇನ್ನೂ ಕೆಳಗೆ ಬರುವಾಗ ಭಯ ಆಯ್ತು. ಆದ್ರೆ ಎಲ್ಲೋ ವಿಮಾನ ನಿಲ್ದಾಣ ಇರಬಹುದೆಂದು ಊಹಿಸಿದೆ. ಆದರೆ ಅದೇ ಕ್ಷಣ ವಿಮಾನ ಬ್ಲಾಸ್ಟ್ ಆಗಿ ಬೆಂಕಿ ಜ್ವಾಲೆ ಕಾಣಿಸಿತು ಎಂದು ಹೇಳಿದ.


