ಮಂಗಳೂರು: ಊಟಕ್ಕೆಂದು ಹೋಗಿ ಮರಳಿ ಬರುತ್ತಿದ್ದಾಗ ಕಾರೊಂದು ಡಿವೈಡರ್ ಗೆ ಗುದ್ದಿ ಎನ್ಎಸ್ ಯುಐ ಮುಖಂಡ ಸೇರಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಜಪ್ಪಿನಮೊಗರು ನಡುಮುಗೇರ ಬಳಿ ನಿನ್ನೆ ತಡರಾತ್ರಿ ನಡೆದಿದೆ.
ಕದ್ರಿ ನಿವಾಸಿ ಅಮನ್ ರಾವ್ ಮತ್ತು ಓಂಶ್ರೀ ಪೂಜಾರಿ ಮೃತ ದುರ್ದೈವಿಗಳು. ಓಂಶ್ರೀ ಅವರು ಎನ್ಎಸ್ ಯುಐ ಮುಖಂಡರಾಗಿದ್ದು ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದು ನಂತರ ಮೋರಿಗೆ ಬಡಿದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

