ಮೇಷ: ಫಿಟ್ ಆಗಿರಲು ಹೆಚ್ಚಿನ ಕ್ಯಾಲೋರಿ ಆಹಾರ ತಪ್ಪಿಸಿ. ಕೌಟುಂಬಿಕ ಸಮಸ್ಯೆಗೆ ಮೊದಲ ಆದ್ಯತೆ ನೀಡಬೇಕು. ಇನ್ನೂ ಕೆಲವರಿಗೆ ಇದು ಪ್ರಣಯ ಕಾಲ.
ವೃಷಭ: ಉದ್ಯಮಗಳ ಯಶಸ್ಸು ಆತ್ಮವಿಶ್ವಾಸವನ್ನು ಹೆಚ್ವಿಸುತ್ತದೆ. ಪ್ರೀತಿಪಾತ್ರರು ತಮ್ಮ ಮನಸ್ಥಿತಿಯನ್ನು ನಿಮ್ಮ ಮುಂದೆ ಇಡಲು ಸಾಧ್ಯವಾಗೋದಿಲ್ಲ. ಏಕಾಂತ ಸಮಯದಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ.
ಮಿಥುನ: ಸಣ್ಣ ವಿಷಯಗಳಿಗೂ ಕಿರಿಕಿರಿಗೊಳ್ಳುತ್ತೀರಿ. ನಿಮ್ಮ ಪ್ರೇಮ ಪ್ರಕರಣದ ಬಗ್ಗೆ ಜೋರಾಗಿ ಹೇಳಿಕೊಳ್ಳಬೇಡಿ. ಸಗಟು ವ್ಯಾಪಾರಿಗಳಿಗೆ ಒಳ್ಳೆಯ ದಿನ.
ಕರ್ಕಾಟಕ: ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಳ್ಳಲು ಪ್ರಯತ್ನಿಸಿ. ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ. ಯಾವುದೇ ಹಳೆಯ ಹೂಡಿಕೆಯಿಂದ ಲಾಭ ಗಳಿಸುವ ಸಾಧ್ಯತೆ.
ಸಿಂಹ: ನಿಮ್ಮ ಮುಂಗೋಪ ತೊಂದರೆಯಲ್ಲಿ ಸಿಲುಕಬಹುದು. ಮಕ್ಕಳಿಗಾಗಿ ಯೋಜನೆಗಳು ಮಾಡಲು ಉತ್ತಮ ದಿನ. ಕೌಶಲ್ಯ ಮಟ್ಟ ಸುಧಾರಿಸಲು ಪ್ರಯತ್ನಿಸಿ.
ಕನ್ಯಾ: ಒತ್ತಡದ ಕೆಲಸ ಸಹನೆಯನ್ನು ಕೆಣಕಬಹುದು. ವ್ಯಾಪಾರಿಗಳಿಗೆ ಹಣದ ನಷ್ಟವಾಗುವ ಸಾಧ್ಯತೆ. ಸಂಗಾತಿ ಜೊತೆಗಿನ ಪ್ರಣಯದ ದಿನ ನೆನಪಿಸುತ್ತೀರಿ.
ತುಲಾ: ನೀವು ಹಣದ ಲಾಭವನ್ನು ಪಡೆಯಬಹುದು. ಶಿಶುವಿನ ಅನಾರೋಗ್ಯ ನಿಮ್ಮನ್ನು ವ್ಯಸ್ತವಾಗಿಸುತ್ತದೆ. ಪ್ರೇಮಿಯ ಜೊತೆ ಹೊರ ಹೋದಾಗ ವರ್ತನೆಯಲ್ಲಿ ನೈಜತೆಯಿರಲಿ.
ವೃಶ್ಚಿಕ: ದೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ಸಹೋದ್ಯೋಗಿಯೊಂದಿಗೆ ಸಂಜೆಯ ಸಮಯ ಕಳೆಯಬಹುದು.
ಧನಸ್ಸು: ದೈಹಿಕ ಲಾಭಕ್ಕಾಗಿ ಧ್ಯಾನ ಆರಂಭಿಸಿ. ಪ್ರೀತಿಯ ಜೀವನದಲ್ಲಿ ಕಹಿ ಘಘಟನೆಗಳನ್ನು ಕ್ಷಮಿಸಿ. ಕೆಲಸದಲ್ಲಿ ಶತ್ರುಗಳು ನಿಮ್ಮ ಮಿತ್ರರಾಗಬಹುದು.
ಮಕರ: ಪ್ರಿಯತಮೆ ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿಯುತ್ತೀರಿ. ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಿ. ನಿಮ್ಮ ಮನಸ್ಸಿಗಿಂತ ಹೃದಯದ ಅಗತ್ಯ ಹೆಚ್ಚಿರುತ್ತದೆ.
ಕುಂಭ: ಚೈತನ್ಯ ಪುನಃ ಸಂಪಾದಿಸಲು ವಿಶ್ರಾಂತಿ ತೆಗೆದುಕೊಳ್ಳಿ. ಯಾವುದೇ ವ್ಯಕ್ತಿಗೆ ಸಾಲ ನೀಡಿದ್ದರೆ ಮರಳಿ ಪಡೆಯುವ ನಿರೀಕ್ಷೆಯಿದೆ. ಜೀವನ ಸಂಗಾತಿಯೊಂದಿಗೆ ಸೇರಿ ಭವಿಷ್ಯಕ್ಕೆ ಆರ್ಥಿಕ ಯೋಜನೆ ಹೂಡಬಹುದು.
ಮೀನ: ಆರೋಗ್ಯಪೂರ್ಣವಾಗಿರಬಹುದು. ಅತ್ತೆ ಮನೆಯ ಕಡೆಯಿಂದ ಹಣದ ಪ್ರಯೋಜನವಾಗುವ ಸಾಧ್ಯತೆ. ನಿಮ್ಮ ಪ್ರೇಮಿಗೆ ಇಷ್ಟವಿಲ್ಲದ ಉಡುಪುಗಳನ್ನು ಧರಿಸಬೇಡಿ.


