ಕಿಡ್ನಿ ಸ್ಟೋನ್ ಅನ್ನುವಂತದ್ದು ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕಾಡುವಂತಹ ಒಂದು ಆರೋಗ್ಯ ಸಮಸ್ಯೆಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಈ ಸಮಸ್ಯೆಯನ್ನು ಕೆಲವರು ಎದುರಿಸುತ್ತಿದ್ದಾರೆ. ಈ ಸಮಸ್ಯೆ ಹಾಗಾದ್ರೆ ಹೇಗೆ ಬರುತ್ತೆ?
ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿರುವವರು, ಖಾರ ಹೆಚ್ಚಿರುವ ಆಹಾರಗಳನ್ನು ಸೇವಿಸುವವರು, ಹೆಚ್ಚು ಕುಳಿತು ಕೆಲಸ ಮಾಡುವವರು, ನೀರು ಕುಡಿಯದೇ ಇರುವವರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಆಸ್ಪತ್ರೆಗೆ ಹೋದರೆ ದುಬಾರಿ ಖರ್ಚು ತಾಗುತ್ತದೆ. ಅದರ ಬದಲು ಕೆಲವು ಮನೆಮದ್ದುಗಳ ಮೂಲಕವೇ ಇದನ್ನು ಕರಗಿಸಬಹುದು.
ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಆಯುರ್ವೇದ ಶಕ್ತಿಯುಳ್ಳ ರಣಪಾಲ ಎಲೆಗಳನ್ನು ಪ್ರತಿದಿನ ಸೇವಿಸಬೇಕು. ಈ ಎಲೆಯನ್ನು ಸಹಜವಾಗಿ ಎಲ್ಲರೂ ನೋಡಿರಬಹುದು. ಇದರಲ್ಲಿರುವ ಫೈಟೊಕೆಮಿಕಲ್ಸ್ ಕಲ್ಲುಗಳ ನೋವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.
ಪ್ರತಿ ದಿನ ಎರಡು ಎಲೆಗಳನ್ನು ತಿನ್ನುವುದರಿಂದ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಿಂದಲೇ ಕಲ್ಲುಗಳ ಗಾತ್ರವನ್ನು ಕಡಿಮೆ ಮಾಡಬಹುದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದಲ್ಲದೆ, ತ್ವರಿತ ಫಲಿತಾಂಶಕ್ಕಾಗಿ ಈ ಎಲೆಗಳನ್ನು ಜ್ಯೂಸ್ ಮಾಡಿ ಕೂಡಾ ಪ್ರತಿದಿನ ಸೇವಿಸಬಹುದು.
ವಿಶೇಷ ಸೂಚನೆ: ಈ ಮನೆ ಮದ್ದು ಸಾಮಾನ್ಯ ಮಾಹಿತಿಯನ್ನು ಆಧರಿಸಿ ಬರೆಯಲಾಗಿದೆ. ಇದನ್ನು ಬಳಸುವ ಮೊದಲು ಸೂಕ್ತ ವೈದ್ಯರ ಸಲಹೆ ಪಡೆಯಿರಿ. ಇದನ್ನು ಕರಾವಳಿ ಟಿವಿ ಖಚಿತಪಡಿಸುವುದಿಲ್ಲ.

