ನಮ್ಮ ದಿನದ ಆರಂಭ ಶುರುವಾಗೋದೆ ಕಾಫಿ ಅಥವಾ ಚಹಾದ ಮೂಲಕ. ಕಾಫಿ ಕುಡಿಯೋ ಅಭ್ಯಾಸ ಯಾರಿಗಿಲ್ಲ ಹೇಳಿ. ಕೆಲವರು ಕಾಫಿಗೆ ಎಷ್ಟು ಎಡಿಕ್ಟ್ ಆಗಿರುತ್ತಾರೆ ಅಂದ್ರೆ ದಿನಕ್ಕೆ ನಾಲ್ಕೈದು ಬಾರಿ ಕಾಫಿ ಕುಡೀಲಿಲ್ಲ ಅಂದ್ರೆ ಅವರಿಗೆ ಸಮಾಧಾನನೂ ಆಗಲ್ಲ, ದಿನವೂ ಪೂರ್ತಿಯಾಗಲ್ಲ. ಆದರೆ ಅತಿಯಾದ್ರೆ ಅಮೃತವೂ ವಿಷ ಎಂಬಂತೆ ಕಾಫಿ ದೀರ್ಘಕಾಲೀನ ರೋಗವನ್ನು ಕೂಡಾ ತಂದೊಡ್ಡುತ್ತದೆ.
ಅತಿಯಾದ ಕಾಫಿ ಸೇವನೆ ಅಧಿಕ ರಕ್ತದೊತ್ತಡ ಮತ್ತು ಕೋಪ, ಆತಂಕವನ್ನು ಕೂಡಾ ಹೆಚ್ಚು ಮಾಡುತ್ತದೆಯಂತೆ. ಸಂಶೋಧನೆಯಲ್ಲಿ ಕಂಡುಬಂದಂತೆ ಇದರಲ್ಲಿರುವ ಕೆಫೀನ್ ಎಂಬ ಅಂಶ ಆರೋಗ್ಯಕ್ಕೆ ಅಪಾಯಕಾರಿ. ಗರ್ಭಿಣಿಯರು ಕಾಫಿಯನ್ನು ಕಡಿಮೆ ಸೇವಿಸಬೇಕು ಎಂದು ಹೇಳುತ್ತಾರೆ. ಇದರಲ್ಲಿರುವ ಕೆಲವು ಅಂಶಗಳು ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ.
ಕಾಫಿಗೆ ಅತಿಯಾದ ಸಕ್ಕರೆ ಹಾಕಿ ಸೇವಿಸುವುದು ಕೂಡಾ ಒಳ್ಳೆಯದಲ್ಲ. ಸಿಡುಕುತನ, ಆತಂಕವನ್ನು ಇದು ಸೃಷ್ಟಿ ಮಾಡುವುದರ ಜೊತೆಗೆ ಆಗಾಗ ಮೂರ್ತವಿರ್ಸಜನೆ, ಅನಿಯಮಿತ ಹೃದಯ ಬಡಿತಕ್ಕೂ ಕಾರಣವಾಗುತ್ತದೆ.
ಕೆಲಸದ ಒತ್ತಡ ನೀಗಿಸಲು ನೀವು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ಕಾಫಿ ನಿದ್ರಾಹೀನತೆಯನ್ನೂ ಹೆಚ್ಚು ಮಾಡುತ್ತದೆ ಎಂಬುವುದು ಗಮನದಲ್ಲಿರಲಿ. ಒಟ್ಟಾರೆಯಾಗಿ ಅತಿಯಾದ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

