ಉಡುಪಿ: ಪೆರ್ಡೂರಿನ ಖ್ಯಾತ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈ ಸಂದರ್ಭ ಸ್ಯಾಂಡಲ್ ವುಡ್ ನ ನಟ, ಕರಾವಳಿಯ ಹೆಮ್ಮೆಯ ಸ್ಟಾರ್ ರಕ್ಷಿತ್ ಶೆಟ್ಟಿ ಭೇಟಿ ನೀಡಿದರು.
ಸಿನಿಮಾ ಕೆಲಸಕ್ಕಾಗಿ ಪೆರ್ಡೂರಿನ ಅಕ್ಕಪಕ್ಕದಲ್ಲೇ ನೆಲೆಸಿರುವ ರಕ್ಷಿತ್ ದೇಗುಲಕ್ಕೆ ತೆರಳಿ ಮುಷ್ಠಿ ಕಾಣಿಕೆ ಸಮರ್ಪಿಸಿದರು.
ಹಲವು ಶತಮಾನಗಳ ಇತಿಹಾಸ ಇರುವ ಅನಂತ ಪದ್ಮನಾಭ ದೇಗುಲದ ಬಗ್ಗೆ ನಟ ಪ್ರಶಂಸೆ ವ್ಯಕ್ತಪಡಿಸಿದರು.

