ಹೊಸದಿಲ್ಲಿ: ಯಾರಿಗಾದರೂ ಕಾಲ್ ಮಾಡಿದಾಗ ರಿಂಗ್ ಆಗುವ ಮೊದಲು `ಸೈಬರ್ ವಂಚನೆಗಳ ವಿರುದ್ಧ ಜಾಗರೂಕರಾಗಿರಿ’ ಎನ್ನುವ ರೆಕಾರ್ಡ್ ಮಾಡಲಾದ ಧ್ವನಿ ಕೇಳಿ ಬರುತ್ತಿತ್ತು. ಕೆಲವೊಮ್ಮೆ ಅದು ಕಿರಿಕಿರಿ ಅನಿಸಿರೋದು ಇದೆ. ಆದರೆ ಇಂದಿನಿಂದ ಆ ಧ್ವನಿ ಸ್ಥಗಿತಗೊಳ್ಳಲಿದೆ.
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಧ್ವನಿಯನ್ನು ಒಳಗೊಂಡ, ಸೈಬರ್ ಅಪರಾಧದ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡುವ ಪರಿಚಿತ ಕಾಲರ್ ಟ್ಯೂನ್ ಇನ್ನು ಮುಂದೆ ಕೇಳೊಲ್ಲ.
ಆನ್ಲೈನ್ ವಂಚನೆ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡುವ ಅಭಿಯಾನ ಕೈಗೊಂಡಿತ್ತು. ಇದೀಗ ಅಭಿಯಾನ ಮುಗಿದಿರುವುದರಿಂದ ಕಾಲರ್ ಟ್ಯೂನ್ ಸ್ಥಗಿತಗೊಳಿಸಲು ನಿರ್ಧರಿಸಿದೆ.

