ಮಂಗಳೂರು: ಮಳೆಗಾಲದಲ್ಲಿ ದರೋಡೆ, ಕಳ್ಳತನಗೈಯ್ಯುವ ಗ್ಯಾಂಗ್ ಗಳ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.
ಉತ್ತರ ಭಾರತದ ಚಡ್ಡಿ ಗ್ಯಾಂಗ್ ಕರಾವಳಿಯಲ್ಲಿ ಈಗಾಗಲೇ ಸಕ್ರಿಯವಾಗಿರುವುದು ಕಂಡುಬಂದಿದೆ. ಉಡುಪಿ, ಮಂಗಳೂರು, ಮಡಿಕೇರಿಯಲ್ಲಿಯೂ ಸರಣಿ ಕಳ್ಳತನ ನಡೆಯುತ್ತಲೇ ಇದೆ.
ಮನೆಯಲ್ಲಿ ಒಂಟಿಯಾಗಿರುವವರು, ಬೀದಿಯ ಕೊನೆಯ ಮನೆಗಳು ಹಾಗೂ ಇತರ ಎಲ್ಲಾ ನಾಗರಿಕರು ಜಾಗ್ರತೆಯಿಂದಿದ್ದು ಅಪರಿಚಿತ ವ್ಯಕ್ತಿಗಳ ನಡೆಯಲ್ಲಿ ಅನುಮಾನ ಬಂದ ಕೂಡಲೇ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

