ಮಂಗಳೂರು: ಇನ್ನೇನೋ ಹಬ್ಬ-ಹರಿದಿನಗಳು ಸಮೀಪಿಸುತ್ತಿದೆ. ಮಂಗಳೂರು ನಗರದಲ್ಲಿ ಸಾರ್ವಜನಿಕವಾಗಿ ಕೆಲವು ಹಬ್ಬದ ಆಚರಣೆಗಳನ್ನು ಪ್ರತೀ ವರ್ಷ ಕೈಗೊಳ್ಳಲಾಗುತ್ತದೆ. ಈ ಸಂದರ್ಭ ಶಾಂತಿ, ಸುರಕ್ಷತೆ ಮತ್ತು ಕಾನೂನು ಪಾಲನೆಯ ಹಿತದೃಷ್ಟಿಯಿಂದ ಕೆಲವು ಷರತ್ತುಗಳನ್ನು ವಿಧಿಸಿ ಮಂಗಳೂರು ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಮುಖ್ಯವಾಗಿ ಜು.6ಕ್ಕೆ ನಡೆಯುವ ಮೊಹರಂ, ಅಗಸ್ಟ್ 16ರಂದು ಕೃಷ್ಣ ಜನ್ಮಾಷ್ಟಮಿ, ಅ.27ಗಣೇಶ ಚತುರ್ಥಿ, ಸ.16ರಂದು ಈದ್ ಮಿಲಾದ್, ಸ.22ರಿಂದ ಅ.2ರವರೆಗೆ ನಡೆಯುವ ದಸರಾ, ಅ.20ರಿಂದ 22ರವರೆಗೆ ನಡೆಯವ ದೀಪಾವಳಿ, ಡಿ.25ಕ್ಕೆ ನಡೆಯುವ ಕ್ರಿಸ್ಮಸ್ ಈ ಎಲ್ಲಾ ಹಬ್ಬ ಆಚರಣೆಗೆ ಷರತ್ತು ವಿಧಿಸಲಾಗಿದೆ.
ಸಾರ್ವಜನಿಕ ಕಾರ್ಯಕ್ರಮಕ್ಕೆ ಪೊಲೀಸರ ಅನುಮತಿ ಕಡ್ಡಾಯ. ಸಮಯದ ನಿರ್ಬಂಧ ಪಾಲಿಸಬೇಕು. ಇಪ್ಪತ್ನಾಲ್ಕು ಗಂಟೆ ಭದ್ರತೆ, ಸಿಸಿಟಿವಿ ಕಡ್ಡಾಯ, ದ್ವೇಷ, ಕೋಮು ಪ್ರಚೋದಿತ ಭಾಷಣ ನಿಷೇಧ, ವಾಹನ ಸುರಕ್ಷತೆ ನಿಯಮ, ಜನಸಂದಣಿ ನಿಯಂತ್ರಣಕ್ಕೆ ಸ್ವಯಂ ಸೇವಕರು, ಅಗ್ನಿಶಾಮಕ ತುರ್ತು ವ್ಯವಸ್ಥೆ, ಸ್ವಚ್ಛತೆ ಮಹಿಳೆಯರ ರಕ್ಷಣೆಗೆ ಆದ್ಯತೆ ಇತ್ಯಾದಿ ಅಂಶಗಳು ಕಡ್ಡಾಯವೆಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ.

