ಕುಂದಾಪುರ: ಕಾಂತಾರ ಸಿನಿಮಾದ ಮುಖೇನ ಅಭಿಮಾನಿಗಳನ್ನು ಮೋಡಿ ಮಾಡಿ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು ತನ್ನ ನಲ್ವತ್ತೆರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಇವರು ಸದ್ಯ ಕುಂದಾಪುರದಲ್ಲಿ ಇದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಅವರು ಅವರ ಹಣೆಗೆ ಮುತ್ತಿಟ್ಟು ಕೇಕ್ ತಿನ್ನಿಸಿ ಬರ್ತ್ ಡೇ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಜಯ್ ಕಿರಂಗದೂರು, ಚೆಲುವೇಗೌಡ ಸೇರಿದಂತೆ ಅವರ ಟೀಂ ನ ಇತರ ಕಲಾವಿದರು ಭಾಗಿಯಾಗಿದ್ದರು.

