ಉಡುಪಿ: ಆನ್ಲೈನ್ ನಲ್ಲಿ ಮೀನಿನ ಬಲೆ ಖರೀದಿಸಿದ ಮಹಿಳೆಯೋರ್ವರಿಗೆ ಸಾವಿರಾರು ರೂ. ವಂಚಿಸಿದ ಘಟನೆ ನಡೆದಿದ್ದು ಉಡುಪಿಯ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಡಿಬೆಂಗ್ರೆಯ ಮಹಿಳೆಯೊಬ್ಬರು ವಂಚನೆಗೀಡಾಗಿದ್ದಾರೆ. ಆನ್ಲೈನ್ ನಲ್ಲಿ ಇವರು ಮೀನಿನ ಬಲೆಯನ್ನು ಬುಕ್ ಮಾಡಿದ್ದರು. ಈ ಬಗ್ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಮೀನಿನ ಬಲೆಯನ್ನು ಡೆಲಿವರಿ ಕೊಡಲು ಹಣ ಹಾಕುವಂತೆ ತಿಳಿಸಿದ್ದಾನೆ.
ಅದರಂತೆ ಮಹಿಳೆ ಇಲ್ಲಿಯವರೆಗೆ ಹಂತ ಹಂತವಾಗಿ ಸುಮಾರು ನಲ್ವತ್ತೊಂದು ಸಾವಿರ ರೂ. ಯನ್ನು ಪಾವತಿಸಿದ್ದಾರೆ. ಆದರೆ ಇಲ್ಲಿಯವರೆಗೆ ಅಪರಿಚಿತ ವ್ಯಕ್ತಿ ಮೀನಿನ ಬಲೆ ಮಾತ್ರ ತಲುಪಿಸದೆ ವಂಚನೆಗೈದಿದ್ದಾನೆ. ಪ್ರಕರಣ ದಾಖಲಾಗಿದೆ.

