ಕಾಂತಾರ ಸಿನಿಮಾದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಸಂಭಾವನೆ ಬಗ್ಗೆ ಸುದ್ದಿಯೊಂದು ಹರಿದಾಡ್ತಿದೆ. ಕಾಂತಾರದ ಬಳಿಕ ಅವರ ಪೇಮೆಂಟ್ ಎಷ್ಟಿರಬಹುದು ಎಂಬುವುದೇ ಎಲ್ಲರ ಕುತೂಹಲವಾಗಿತ್ತು. ಇದೀಗ ಅದಕ್ಕೆ ಉತ್ತರವಾಗಿ ಒಂದು ನಂಬರ್ ಸಿಕ್ಕಿದ್ದು ಕಾಂತಾರ-೧ಗೆ ಅದೇ ರಿಷಬ್ ಅವರು ಪಡೆಯೋ ಸಂಭಾವನೆ ಎನ್ನಲಾಗ್ತಿದೆ.
ಕಾಂತಾರ ಸಿನಿಮಾದ 2400 ಪಟ್ಟು ಈ ಕಾಂತಾರ ಪ್ರೀಕ್ವೆಲ್ ಗೆ ರಿಷಬ್ ಶೆಟ್ಟಿ ಅವರು ಸಂಭಾವನೆ ಪಡೆಯುತ್ತಿದ್ದಾರಂತೆ. ಅಂದರೆ ಕಾಂತಾರ-೧ಗೆ ರಿಷಬ್ ಅವರು ಬರೋಬ್ಬರಿ ನಾಲ್ಕು ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ. ಆದರೆ ಇದನ್ನು ರಿಷಬ್ ಶೆಟ್ಟಿ ಅವರಾಗಲೀ ಅಥವಾ ನಿರ್ಮಾಣ ಸಂಸ್ಥೆಯಾಗಲಿ ಸ್ಪಷ್ಟಪಡಿಸಿಲ್ಲ.
ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲೇ ಕಾಂತಾರ ಕುತೂಹಲವನ್ನು ಕೆರಳಿಸಿದೆ. ಭಾರೀ ನಿರೀಕ್ಷೆ ಹುಟ್ಟಿಸಿರುವ ಕಾಂತಾರ ಪ್ರೀಕ್ವೆಲ್ ನ ಶೂಟಿಂಗ್ ಈಗಾಗಲೇ ಮುಗಿದಿದ್ದು ರಿಲೀಸ್ ಡೇಟ್ ಕೂಡಾ ಫಿಕ್ಸ್ ಆಗಿದೆ.

