ಉಡುಪಿ: ಮದ್ಯವ್ಯಸನಿಯಾಗಿದ್ದ ಯುವಕನೋರ್ವ ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೋಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ನಿಟ್ಟೂರಿನ ಇಪ್ಪತ್ತಾರು ವರ್ಷದ ದೀಕ್ಷಿತ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಹತ್ತನೇ ತರಗತಿ ವಿದ್ಯಾಭ್ಯಾಸದ ಬಳಿಕ ಶಿಕ್ಷಣ ಬಿಟ್ಟು ಪೈಟಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದರು. ಮೂರು ವರ್ಷಗಳಿಂದ ಇವರು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು.
ನಾಲ್ಕು ತಿಂಗಳಿಂದ ಕುಡಿತದ ಚಟ ಬಿಟ್ಟಿದ್ದ ಇವರು ಮತ್ತೆ ಅದೇ ಚಾಳಿ ಆರಂಭಿಸಿದ್ದರು. ಮನೆಯಲ್ಲಿ ವಿನಾ ಕಾರಣ ಗಲಾಟೆ ಮಾಡಿ ರಾತ್ರಿ ಒಂದು ಗಂಟೆಯವರೆಗೂ ಮನೆಯಲ್ಲೇ ಇದ್ದು ನಂತರ ಹೋದವರು ಮನೆಯ ಪಕ್ಕದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

