ಮಂಗಳೂರು: ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಜಪ್ಪಿನಮೊಗರು ತಂದೊಳಿಗೆ ನಿವಾಸಿ ರೋಹನ್ ಸಲ್ಡಾನ (45) ಎಂಬಾತ ಬಂಧಿತ ಆರೋಪಿ.
ಈತ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ. ಈ ರೀತಿ ಯಾಗಿ ಆರೋಪಿ ಕೇವಲ ಮೂರು ತಿಂಗಳಲ್ಲಿ ೪೫ ಕೋಟಿ ರೂ. ವ್ಯವಹಾರ ಮಾಡಿರೋದು ಪತ್ತೆಯಾಗಿದೆ.
ಈತನ ಐಷಾರಾಮಿ ಬೆಡ್ ರೂಮ್ ಬಳಿ ಹೈಡ್ ಔಟ್ ರೂಮ್ ಇದೆ. ಬೆಡ್ ರೂಮ್ ಕಬೋರ್ಡ್ ಒಳಗೆ ಒಂದು ಹಿಡನ್ ಡೋರ್ ಇದೆ. ಅದನ್ನು ತಳ್ಳಿದ್ದರೆ ವಿಶಾಲವಾದ ರೂಮ್ ಇದೆ. ಪೊಲೀಸರು ಅಥವಾ ಮೋಸ ಹೋದವರು ಬಂದರೆ ಇದೇ ರೂಮ್ನಲ್ಲಿ ಆತ ಅಡಗಿಕೊಳ್ಳುತ್ತಿದ್ದ.
ಇನ್ನು ರೋಶನ್ ಸಲ್ಡಾನಾ ಮನೆ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಏಕೆಂದರೆ ಮನೆ ತುಂಬಾ ವಿದೇಶಿ ಮದ್ಯಗಳ ರಾಶಿಯೇ ಇದೆ. ಕೋಟಿ ಕೋಟಿ ಮೌಲ್ಯದ ವಿದೇಶಿ ಮದ್ಯ ಮನೆಯಲ್ಲಿ ಪತ್ತೆ ಆಗಿದೆ. ಬಂದ ಅತಿಥಿಗಳಿಗೆ ರಾಜಾತಿಥ್ಯ ಸುಗುತ್ತಿತ್ತು. ಮನೆಯ ಬಾರ್ ಕೌಂಟರ್ ಐಷಾರಾಮಿ ಪಬ್ನ್ನು ಮೀರಿಸುವಂತಿದೆ.
ಒಂದು ರೌಂಡ್ ಮಾತುಕತೆ ಬಳಿಕ ಉದ್ಯಮಿಗಳಿಗೆ ತನ್ನ ಜಾಲದ ಖೆಡ್ಡಾಕ್ಕೆ ಬೀಳಿಸುತ್ತಿದ್ದ ರೋಹನ್, 50 ಕೋಟಿಯಿಂದ 100 ಕೋಟಿ ರೂ. ವ್ಯವಹಾರ ಅಥವಾ ಅದಕ್ಕಿಂತ ದೊಡ್ಡ ಮೊತ್ತದ ಸಾಲ ನೀಡಲು ಹಣಕ್ಕೆ ಡಿಮ್ಯಾಂಡ್ ಇಡುತ್ತಿದ್ದ. ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ಉದ್ಯಮಿಗಳಿಗೆ ನಾನಾ ನೆಪ ಹೇಳಿ ಎಸ್ಕೇಪ್ ಆಗುತ್ತಿದ್ದ. ಹೀಗೆ ಕೇವಲ 3 ತಿಂಗಳಲ್ಲೇ 45 ಕೋಟಿ ರೂ ವ್ಯವಹಾರ ನಡೆಸಿರುವುದು ಪತ್ತೆ ಆಗಿದ್ದು ಈತನ ಖತರ್ನಾಕ್ ಅವ್ಯವಹಾರಕ್ಕೆ ಪೊಲೀಸರೇ ದಂಗಾಗಿದ್ದಾರೆ.
ಆರೋಪಿಯ ಮನೆಯಲ್ಲಿ ಸಾವಿರಾರು ರೂ. ಮೌಲ್ಯದ ಗಿಡಗಳು, ಐಷಾರಾಮಿ ಶಾಂಪೇನ್ ಗಳು, ಮಾದಕ ಪೇಯಗಳ ದಾಸ್ತಾನು ಕಂಡು ಪೊಲೀಸರೇ ದಂಗಾಗಿದ್ದಾರೆ. ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ.

