ಕುಂದಾಪುರ: ಇಲ್ಲಿನ ಸಂತೆ ಮಾರುಕಟ್ಟೆ ಬಳಿಯ ಅಂಗಡಿಯೊಂದರ ಶಟರ್ ಮುರಿದು ಕಳ್ಳರು ಮಧ್ಯರಾತ್ರಿ ಒಳಗೆ ನುಗ್ಗಿ ಸುಮಾರು ತೊಂಭತ್ತೈದು ಸಾವಿರ ರೂ. ಮೌಲ್ಯದ ವಸ್ತುಗಳನ್ನು ಎಗರಿಸಿದ ಘಟನೆ ನಡೆದಿದ್ದು ನಾಲ್ವರು ಆರೋಪಿಗಳನ್ನು ನಿನ್ನೆ ಪೊಲೀಸರು ಉಡುಪಿಯ ಸಂತೆಕಟ್ಟೆ ಬಳಿ ಬಂಧಿಸಿದ್ದಾರೆ.
ಮಂಗಳೂರಿನ ಸರ್ಫರಾಜ್, ಜಾಕೀರ್, ಮೊಹಮ್ಮದ್ ಅಲ್ಪಾಜ್, ಮಂಜನಾಡಿಯ ಮೊಹಮ್ಮದ್ ರಿಯಾಜ್ ಬಂಧಿತ ಆರೋಪಿಗಳು. ಆರೋಪಿಗಳಿಂದ 50 ಕೆಜಿ ತೂಕದ ತಾಮ್ರದ ಸರಿಗೆ, 64ಕೆಜಿ ಹಿತ್ತಾಳೆಯ ವಸ್ತು, 20ಕೆಜಿ ತೂಕದ ಅಲ್ಯೂಮಿನಿಯಂ ವಸ್ತು, ಫ್ರಿಡ್ಜ್ ಕಂಪ್ರೆಸರ್, 45 ಹಳೆಯ ಮೊಬೈಲ್ ಗಳು ಮತ್ತು ಕಾರನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಕುಂದಾಪುರ ನಗರ ಠಾಣಾ ಎಸ್ಐಗಳಾದ ನಂಜಾ ನಾಯ್ಕ ಸೇರಿದಂತೆ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.

