ಉಡುಪಿ: ಬಹು ವರ್ಷದ ಬೇಡಿಕೆಯೊಂದು ಕೊನೆಗೂ ಈಡೇರುತ್ತಿದೆ. ಹಲವು ಕಾರಣಗಳಿಂದ ಕಳೆದ ಏಳು ವರ್ಷಗಳಿಂದ ಪೂರ್ಣಗೊಳ್ಳದೇ ಆಮೆಗತಿಯಲ್ಲಿ ಸಾಗುತ್ತಿದ್ದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇದೀಗ ಅಂತಿಮ ಘಟ್ಟಕ್ಕೆ ಬಂದಿದ್ದು, ಇಂದು ಮೇಲ್ಸೇತುವೆ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಲಾಗಿದೆ.
ಇದೀಗ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಮೇಲ್ಸೇತುವೆ ಕಾಂಕ್ರಿಟೀಕರಣ ಮಾಡುವ ಕಾಮಗಾರಿಯನ್ನು ಆರಂಭಿಸ ಲಾಗಿದೆ.
ಕಾಮಗಾರಿ ಕೆಲಸವನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ ಸಂಸದ ಕೋಟ ಮಳೆ ವಿಪರೀತ ಬಾರದಿದ್ದಲ್ಲಿ ಹನ್ನೆರಡು ದಿನದಲ್ಲಿ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದರು.


