ಮಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ಮಹತ್ತರ ತಿರುವು ಪಡೆದಿದೆ. ಆರೋಪಿ ರೋಶನ್ ಸಲ್ದಾನ ಮತ್ತಿತರರ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರೆಕ್ಟೊರೇಟ್ ಆಫ್ ಎನ್ಫೋರ್ಸ್ಮೆಂಟ್ ಮಂಗಳೂರು ಸಬ್ ರೆನಲ್ ಕಚೇರಿಯು ಹಣ ವರ್ಗಾವಣೆ ತಡೆ ಕಾಯ್ದೆಯಡಿ ಐದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿ ರೋಶನ್ ಸಲ್ಡಾನ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನ ವ್ಯವಹಾರಕ್ಕೆ ಸಂಬಂಧಿಸಿ ಡೈರಿಗಳು ಮತ್ತು ದಾಖಲೆಗಳು ಲಭ್ಯವಾಗಿದೆ.
ಎಫ್ಐಆರ್ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಶೋಧದ ವೇಳೆ ವಶಪಡಿಸಿಕೊಳ್ಳಲಾದ ಮತ್ತು ಸ್ಥಗಿತಗೊಳಿಸಲಾದ ಒಟ್ಟು ಮೌಲ್ಯ 9.5 ಕೋ.ರೂ. ಆಗಿದೆ ಎಂದು ಪ್ರಕಟನೆ ತಿಳಿಸಿದೆ.


