ಕುಂದಾಪುರದ ಹೆಸರಾಂತ ಉದ್ಯಮಿ, ಸಮಾಜ ಸೇವಕ ಶ್ರೀ ಎ.ಅಭಿನಂದನ್ ಶೆಟ್ಟಿ ಅವರ ನೇತೃತ್ವದ ಫೋರ್ಟ್ ಗೇಟ್ ಎಜುಕೇಶನ್ ಟ್ರಸ್ಟ್ ಇದರ ಅಧೀನದಲ್ಲಿ ಹೊಸ ಕಾನೂನು ಮಹಾವಿದ್ಯಾಲಯ ಕುಂದಾಪುರದಲ್ಲಿ ಪ್ರಾರಂಭವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಶ್ರೀ ಅಭಿನಂದನ್ ಶೆಟ್ಟಿ, ಫೋರ್ಟ್ ಗೇಟ್ ಎಜುಕೇಶನ್ ಟ್ರಸ್ಟ್ ವತಿಯಿಂದ ಈಗಾಗಲೇ ಓಕ್ ವುಡ್ ಇಂಡಿಯನ್ ಸ್ಕೂಲ್ ಈಗಾಗಲೇ ಅತ್ಯುತ್ತಮ ಫಲಿತಾಂಶ , ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇದೀಗ ಕುಂದಾಪುರದ ಜನರ ಬಹುವರ್ಷಗಳ ಕನಸು ಕಾನೂನು ವಿದ್ಯಾಲಯ ಶೀಘ್ರದಲ್ಲೇ ಪ್ರಾರಂಭಿಸುದಾಗಿ ತಿಳಿಸಿದರು.
ಈ ಶೈಕ್ಷಣಿಕ ವರ್ಷ 2025-26 ರ ಶೈಕ್ಷಣಿಕ ವರ್ಷದಲ್ಲಿ ಮೊದಲನೆಯ ಹಂತದಲ್ಲಿ ಮೂರು ವರ್ಷದ ಕಾನೂನು ಪದವಿಗೆ ಪ್ರವೇಶಾತಿ ಪ್ರಾರಂಭವಾಗಲಿದ್ದು, ಹುಡುಗರು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಇರಲಿದೆ.

