ಮಂಗಳೂರು: ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಹೊಂಡಕ್ಕೆ ಬಿದ್ದು ಚಾಲಕ ಮೃತಪಟ್ಟ ಘಟನೆ ಮಂಗಳೂರಿನ ನೀರುಮಾರ್ಗ ಸಮೀಪದ ಮಾಣೂರು ಬಳಿ ಸಂಭವಿಸಿದೆ.
ಮೃತರನ್ನು ರಿಕ್ಷಾ ಚಾಲಕ ಕಿಶೋರ್ ಕುಮಾರ್ (48) ಎಂದು ಗುರುತಿಸಲಾಗಿದೆ.
ಕಿಶೋರ್ ಅವರು ಅಡ್ಯಾರ್ಕಟ್ಟೆಯಿಂದ ನೀರುಮಾರ್ಗದತ್ತ ತೆರಳುತ್ತಿದ್ದರು. ಮಾಣೂರು ದೇವಸ್ಥಾನದ ಇಳಿಜಾರು ಪ್ರದೇಶದಲ್ಲಿ ರಸ್ತೆಯಲ್ಲಿ ಸಾಗುತಿದ್ದಾಗ ಅರ್ಫಾಝ್ ಅಹಮ್ಮದ್ ಅಫ್ರಿದ್ ಎಂಬವರು ವಿರುದ್ಧ ದಿಕ್ಕಿನಿಂದ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಪಕ್ಕದಲ್ಲಿರುವ ಹೊಂಡಕ್ಕೆ ರಿಕ್ಷಾ ಎಸೆಯಲ್ಪಟ್ಟದ್ದಲೆ ಅದರ ಮೇಲೆ ಕಾರು ಬಿದ್ದಿತು.
ರಿಕ್ಷಾ ಚಾಲಕ ಕಿಶೋರ್ ತಲೆಗೆ ಗಂಭೀರ ಗಾಯವಾಯಿತು. ಸ್ಥಳೀಯರು ವೆನಾÉಕ್ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಕಿಶೋರ್ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದರು. ಈ ಬಗ್ಗೆ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

