ಬ್ರಹ್ಮಾವರ: ಪೆಜಮಂಗೂರು ಗ್ರಾಮದ ಬೆನಗಲ್ ಬ್ರಿಡ್ಜ್ ಕೆಳಗೆ ಬೆನಗಲ್ ಹೊಳೆಯ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಮಹೀಂದ್ರ ಪಿಕ್ಅಪ್ ವಾಹನ ಸಮೇತ ಮರಳನ್ನು ವಶಕ್ಕೆ ಪಡೆದಿದ್ದಾರೆ.
ಸೆ.21ರಂದು ಜಯಕುಮಾರ್, ಎಎಸ್ಐ, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಪೆಜಮಂಗೂರು ಗ್ರಾಮದ ಬೆನಗಲ್ ಬ್ರಿಡ್ಜ್ ಕೆಳಗೆ ಬೆನಗಲ್ ಹೊಳೆಯಲ್ಲಿ ಮರಳನ್ನು ಕಳ್ಳತನ ಮಾಡಿ ಪಿಕ್ ಅಪ್ ವಾಹನಕ್ಕೆ ಲೋಡ್ ಮಾಡುತ್ತಿದ್ದಾರೆಂದು ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿತ ಗೋಪಾಲನನ್ನು ವಿಚಾರಿಸಿದಾಗ ಮರಳನ್ನು ಹೊಳೆಯಿಂದ ತೆಗೆಯಲು ಮತ್ತು ಮಾರಾಟ ಮಾಡಲು ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರುತ್ತಾರೆ.
ಆರೋಪಿ ಯಾವುದೇ ಪರವಾನಿಗೆ ಹೊಂದದೇ, ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಹೊಳೆಯಿಂದ ಸರಕಾರದ ಸೊತ್ತಾದ ಮರಳನ್ನು ಕಳ್ಳತನದಿಂದ ತೆಗೆದು ಆ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿರುವುದಾಗಿದೆ. ವಾಹನದಲ್ಲಿದ್ದ ಮರಳು ತುಂಬಿದ 20 ಸಿಮೆಂಟ್ ಚೀಲ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

