ದಿನಾಂಕ 26.09.2025 ಶುಕ್ರವಾರದಂದು 2 ನೇ ವರ್ಷದ ವಿ. ಎಸ್.ಎಸ್. ದಸರಾ ಸಂಭ್ರಮ ಭವ್ಯ ಪುರ ಮೆರವಣಿಗೆಯೊಂದಿಗೆ ವಿ. ಎಸ್.ಎಸ್.ಆಂಗ್ಲ ಮಾಧ್ಯಮ ಶಾಲೆ (C.B.S.E) ಮುದ್ದೂರು ವಿದ್ಯಾನಗರಿಯಲ್ಲಿ ನಡೆಯಿತು.

ಶಾರದಾ ಮೂರ್ತಿಯನ್ನು ಮುದ್ದೂರು ಸಭಾಭವನದಿಂದ ವಿದ್ಯಾರ್ಥಿಗಳ ಮೆರವಣಿಗೆ ಮೂಲಕ ಚಂಡೆ ಹಾಗೂ ಕುಣಿತ ಭಜನೆಯೊಂದಿಗೆ ಶಾಲೆಗೆ ತರಲಾಯಿತು. ಅರ್ಚಕರ ನೇತೃತ್ವದಲ್ಲಿ ಶಾಲೆಯಲ್ಲಿ ಶಾರದಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಪೂಜಾ ಕಾರ್ಯಕ್ರಮಗಳ ಮೂಲಕ ಶಾರದಾ ಮಾತೆಯನ್ನು ಆರಾಧಿಸಿ ಶಾಲಾ ವಿದ್ಯಾರ್ಥಿಗಳಿಂದ ತರಗತಿವಾರು ಭಜನಾ ಕಾರ್ಯಕ್ರಮ ನೆರವೇರಿತು. ಬಳಿಕ ಶಾರದಾ ಮೂರ್ತಿಯ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ನೂತನ ವಸತಿ ಶಾಲೆ ಮತ್ತು ಪ್ರೌಢ ಶಾಲಾ ಕಟ್ಟಡದ ಭೂಮಿ ಪೂಜೆ ನೆರವೇರಿತು.

