ದಿನಾಂಕ 23 ಅಕ್ಟೋಬರ್ ಸಂಜೆ 4:45ಕ್ಕೆ, ಎಸ್.ಪಿ ಕ್ರಿಯೇಶನ್ ಕ್ಲಬ್ನಲ್ಲಿ ಹಣ ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿದ್ದ ಏಳು ಮಂದಿ ಪೊಲೀಸರ ಬಲೆಗೆ ಸಿಕ್ಕಿದ್ದಾರೆ.
ಕೋಟ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಮತ್ತು ತಂಡದವರು ನಡೆಸಿದ ಧಾಳಿಯಲ್ಲಿ, ರೂ.1,130 ನಗದು, ಇಸ್ಪೀಟ್ ಎಲೆಗಳು, 7 ಮೊಬೈಲ್ಗಳು, ಕುರ್ಚಿಗಳು, ಟೇಬಲ್ಗಳು, ಸಿಸಿಟಿವಿ ಡಿವಿಆರ್ ಮತ್ತು ಕ್ಲಬ್ನ ಲೆಜ್ಜರ್ ಪುಸ್ತಕಗಳು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 193/2025 ಅಡಿಯಲ್ಲಿ 79, 80 ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಕ್ರಮದಿಂದ ಜುಗಾರಿ ವಲಯಕ್ಕೆ ಬಲೆ ಬೀಳುತ್ತಿದೆ

