ಮಂಗಳೂರು: ನಗರದ ಬಂದರು ಬೀಬೀ ಅಲಾಬಿ ರಸ್ತೆಯಲ್ಲಿರುವ ಅಂಗಡಿಯೊಂದರ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿರುವ ಕುರಿತು ವರದಿಯಾಗಿದೆ.
ಶಪಾಕತ್ ಆಲಿ ಎಂಬವರು ತನ್ನ ಹೆಂಡತಿಯ ಸ್ಕೂಟರನ್ನು ಅ. 13ರಂದು ಅಪರಾಹ್ನ 3 ಗಂಟೆಗೆ ಬೀಬೀ ಅಲಾಬಿ ರಸ್ತೆಯಲ್ಲಿ ನಿಲ್ಲಿಸಿ ಖರೀದಿಗೆಂದು ಅಂಗಡಿಯೊಂದಕ್ಕೆ ಹೋಗಿದ್ದಾರೆ.
3.10ಕ್ಕೆ ವಾಪಸು ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಸ್ಕೂಟರ್ ಇರಲಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಕುರಿತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

