ಬೆಳ್ತಂಗಡಿ: ಅನುಮಾನಾಸ್ಪದ ವ್ಯಕ್ತಿಯೋರ್ವ ಕತ್ತಿ ಹಾಗೂ ಚಾಕು ಹಿಡಿದುಕೊಂಡು ಓಡಾಟ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುತ್ತೂರು ಗ್ರಾಮದ ಶಾಲೆಯ ಬಳಿ ಮಂಗಳವಾರ ಸಂಜೆ ನಡೆದಿದೆ.
ಈ ವ್ಯಕ್ತಿ ಆರಂಭದಲ್ಲಿ ಕುತ್ತೂರು ಪೇಟೆಯ ಸಮೀಪ ಕಾಣಿಸಿಕೊಂಡಿದ್ದು, ಆತನನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿದ್ದಾನೆ. ಆ ವ್ಯಕ್ತಿ ತುಳುವಿನಲ್ಲಿ ಮಾತನಾಡಿದ್ದು, ತಾನು ರಬ್ಬರ್ ಟ್ಯಾಪಿಂಗ್ ಗೆ ಬಂದಿರುವುದಾಗಿ ಹೇಳಿದ್ದಾನೆ.
ಬಳಿಕ ಆತನ ಸೊಂಟದಲ್ಲಿ ಕತ್ತಿ ಇರಿಸಿಕೊಂಡಿರುವುದು ನೋಡಿ ಇದನ್ನು ಪ್ರಶ್ನಿಸಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ನಂತರ ಆತ ಮನೆಯೊಂದರ ಹಿಂಭಾಗದಲ್ಲಿ ಕಾಣಿಸಿಕೊಂಡಿದ್ದಾನೆ. ಇದನ್ನು ನೋಡಿ ಜನರು ಆತಂಕಗೊಂಡಿದ್ದು, ತಕ್ಷಣ ವೇಣೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅನುಮಾನಾಸ್ಪದ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿಕೊಂಡಿದ್ದರು.
