ಉಡುಪಿಯ ಅಂಬಲಪಾಡಿಯಲ್ಲಿ ಶುಕ್ರವಾರ (ನವೆಂಬರ್ 7) ರಂದು ನಟ ಹರೀಶ್ ರಾಯ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಸದ್ಯ ಹರೀಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿರುವ ಅಂಜನಾಪುರದ ಮನೆಗೆ ತೆಗೆದುಕೊಂಡು ಹೋಗಿದ್ದು, ಅಲ್ಲಿ ಸಾರ್ವಜನಿಕರ ದರ್ಶನದ ಬಳಿಕ ಉಡುಪಿಗೆ ಪಾರ್ಥಿವ ಶರೀರ ರವಾನೆ ಆಗಲಿದೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಹರೀಶ್ ಆಚಾರ್ಯ ಅವರ ಅಂಬಲಪಾಡಿಯ ನಿವಾಸದಲ್ಲಿ ಅವರ ತಾಯಿ ಮತ್ತು ಸಹೋದರ ವಾಸವಾಗಿದ್ದಾರೆ. ಅಂಬಲಪಾಡಿಯಲ್ಲೇ ಹರೀಶ್ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
ಶುಕ್ರವಾರ (ನವೆಂಬರ್ 7) ಉಡುಪಿಯಲ್ಲಿ ಹರೀಶ್ ರಾಯ್ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬವರು ಮಾಹಿತಿ ನೀಡಿದ್ದಾರೆ.
ಹರೀಶ್ ರಾಯ್ ಅವರು ಅಂಗಾಂಗ ದಾನ ಮಾಡಲು ಇಚ್ಛಿಸಿದ್ದರು. ಆದರೆ ಕ್ಯಾನ್ಸರ್ ಇದ್ದ ಕಾರಣ ಅಂಗಾಂಗ ದಾನ ಸಾಧ್ಯವಾಗಲ್ಲವೆಂದು ವೈದ್ಯರು ಹೇಳಿದ್ದಾರೆ.
ಸ್ವರ್ಣೋದ್ಯಮ ನಡೆಸುವ ಕುಟುಂಬಕ್ಕೆ ಸೇರಿರುವ ಹರೀಶ್ ಚಿತ್ರರಂಗದಲ್ಲಿ ಪೋಷಕ ನಟರಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು.
