ಕೊಲ್ಲೂರು : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ರಾಘವೇಂದ್ರ ಅವರ ಅಕ್ಕನ ಮಗ ಕಾರ್ತಿಕ್ (29) ಎಂಬಾತ ಹಾಡಿ ಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ.
ಕಾರ್ತಿಕ್ ಸರಿಯಾಗಿ ಕೆಲಸಕ್ಕೆ ಹೋಗದೇ ದಿನವಿಡಿ ಮೊಬೈಲ್ ನೊಂದಿಗೆ ಅಡವಾಟಿಕೊಂಡು ದಿನ ಕಳೆಯುತ್ತಿದ್ದು, ಈ ಬಗ್ಗೆ ಅವನ ತಂದೆ, ತಾಯಿ ಹಾಗೂ ಸಂಬಂಧಿಕರು ಬುದ್ದಿಮಾತು ಹೇಳಿದರೂ ಕೇಳುತ್ತಿರುವುದಿಲ್ಲ. ವಿಪರೀತ ಮೊಬೈಲ್ ನೋಡುವ ಚಾಳಿಯಿಂದ ಯಾರೊಂದಿಗೂ ಮಾತನಾಡದೇ ಮಂಕಾಗಿ ಇರುತ್ತಿದ್ದು, ನವೆಂಬರ್ 04ರಂದು ರಾತ್ರಿ 8:30 ಗಂಟೆಯಿಂದ 9:00 ಗಂಟೆಯ ಅವಧಿಯಲ್ಲಿ ಸಂಬಂದಿಕರ ಹಾಡಿಯ ಗೇರು ಮರಕ್ಕೆ ಹಗ್ಗದ ಸಹಾಯದಿಂದ ನೇಣು ಬಿಗಿದುಕೊಂಡು ನೇತಾಡುತ್ತಿದ್ದು, ಇದನ್ನು ನೋಡಿದ ರಾಘವೇಂದ್ರ ಹಾಗೂ ಇತರರು ಕಾರ್ತಿಕ್ ನನ್ನು ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾಗಿ ತಿಳಿಸಿರುತ್ತಾರೆ.
ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
