ಕಾರ್ಕಳ : ಪೆರ್ವಾಜೆ ಪತ್ತೊಂಜಿಕಟ್ಟೆ ಕನ್ನಡ ಮಾಧ್ಯಮ ಶಾಲೆಯ ಸಮೀಪದ ಶಶಾಂಕ್ ಎಸ್. ರಾವ್ ಅವರ ಮಾಲಿಕತ್ವದ ಬತ್ತದ ಹುಲ್ಲಿನ ಗೋದಾಮಿನಲ್ಲಿ ದಾಸ್ತಾನಿರಿಸಿದ್ದ ಹುಲ್ಲಿನ ಬಾಣವೆಗೆ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು ಅಂದಾಜು 3 ಲಕ್ಷ ರೂ. ಮೌಲ್ಯದ ಹುಲ್ಲು ಬೆಂಕಿಗೆ ಆಹುತಿಯಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದು ಸಂಭಾವ್ಯ ದುರಂತ ವನ್ನು ತಪ್ಪಿಸಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಚಂದ್ರಶೇಖರ, ರೂಪೇಶ್, ಸುರೇಶ್, ಚಾಲಕ ಸಂಜಯ, ತಂತ್ರಜ್ಞ ಮುಜಾಬಿಲ್ ಹಾಗೂ ನಿತ್ಯಾನಂದ ಭಾಗಿಯಾಗಿದ್ದರು.
