ಉಡುಪಿ: ಉದಯ್ ಕುಮಾರ್ ತನ್ನ ಮೊಬೈಲ್ನಲ್ಲಿ ಅಧ್ಯಯನಕ್ಕಾಗಿ ಟೆಲಿಗ್ರಾಂ ಆ್ಯಪ್ನ್ನು ಉಪಯೋಗಿಸುತ್ತಿದ್ದು ಆ್ಯಪ್ನ 3011 ಎಂಬ ಗ್ರೂಪ್ನಲ್ಲಿ ಇನ್ವೆಸ್ಟ್ಮೆಂಟ್ ಲಾಭಾಂಶದ ಕುರಿತಾಗಿ ಜೂನ್ 20 ರಂದು ಬಂದ ಮೆಸೇಜ್ ನಂತೆ ಗ್ರೂಪಿನ ಅಡ್ಮಿನ್ ನೀಡಿದ https://t.me/KELLY_5509 ಎಂಬ ಯೂಸರ್ ನೇಮ್ಗೆ ಹೋಗಿದ್ದು, ಅದರಲ್ಲಿ ರೂಪಾಯಿ 5000/- ಮೊತ್ತವನ್ನು ಹೂಡಿಕೆ ಮಾಡಿದರೆ 30% ರಿಂದ 50% ಲಾಭಾಂಶ ನೀಡುತ್ತೇವೆಂದು ಸಂದೇಶ ಕಳುಹಿಸಿರುವುದನ್ನು ನಂಬಿ ಉದಯ್ ಜೂನ್ 20 ರಿಂದ ಅಕ್ಟೋಬರ್ 8ರ ವರೆಗೆ ಒಟ್ಟು ರೂಪಾಯಿ 42,75,103/- ಹಣವನ್ನು ತನ್ನ ಎಸ್ಬಿಐ ಹಾಗೂ ಕೆನರಾ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿರುತ್ತಾರೆ.
ಆಗಸ್ಟ್ 3ರಂದು ದಿನಾಂಕ ಉದಯ್ ಕುಮಾರ್ Trusted Venture Capital Ltd. ಎಂಬ ಟೆಲಿಗ್ರಾಂ ಗ್ರೂಪನ್ನು ಓಪನ್ ಮಾಡಿದ್ದು, ಅದರಲ್ಲಿ ಪ್ರವೀಣ್ ಕುಮಾರ್ ಎಂಬ ವ್ಯಕ್ತಿಯು ಟ್ರೇಡಿಂಗ್ ಬಗ್ಗೆ ಚಾಟ್ ಮಾಡುತ್ತಿದ್ದು, ಆತ ನೀಡಿದ UPI ID ಗೆ ಆಗಸ್ಟ್ 03ರಿಂದ ಅಕ್ಟೋಬರ್ 29ರ ವರೆಗೆ ಒಟ್ಟು 6,92,000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ.
ಸೆಪ್ಟೆಂಬರ್ 03ರಂದು Coinbase Trade Investment ಎಂಬ ಟೆಲಿಗ್ರಾಂ ಗ್ರೂಪನ್ನು ಓಪನ್ ಮಾಡಿದ್ದು, ಅದರಲ್ಲಿ AGENT ನೀಡಿದ ವಿವಿಧ ಖಾತೆಗಳಿಗೆ ಒಟ್ಟು ರೂಪಾಯಿ 51,48,603/- ಹಣ ವರ್ಗಾವಣೆ ಮಾಡಿದ್ದು, ಆರೋಪಿತರು ಪಿರ್ಯಾದಿದಾರರು ಹಾಕಿದ ಹಣವನ್ನಾಗಲಿ ಅಥವಾ ಲಾಭದ ಹಣವನ್ನಾಗಲಿ ನೀಡದೇ ಪಿರ್ಯಾದಿದಾರರಿಗೆ ವಂಚಿಸಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
