ಬೈಂದೂರು : ಬೈಕಿಗೆ ರಾಂಗ್ ಸೈಡ್ ನಿಂದ ಬಂದ ಸ್ಕೂಟರ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಬೈಂದೂರು ಸಮೀಪ ನಡೆದಿದೆ.
ಶನಿವಾರ ರಾತ್ರಿ ಹೀರೋ ಹೋಂಡಾ ಬೈಕ್ ಸವಾರ ಶರತ್ ಮತ್ತು ಸಹಸವಾರ ಸುದಾಮ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿರುವಾಗ, ನಾಗೂರು ವೀರ ಆಂಜನೇಯ ದೇವಸ್ಥಾನ ಸಮೀಪ NH 66 ರಸ್ತೆಯಲ್ಲಿ ಮೇಸ್ಟ್ರೊ ಸ್ಕೂಟರ್ ನ್ನು ಮಹಾಬಲ ಶೆಟ್ಟಿಯವರು ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಎದುರಿನಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಸಹಸವಾರರು ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಮತ್ತು ಮೈಕಾಲಿಗೆ ಪೆಟ್ಟಾಗಿದ್ದು, ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.
ಮಹಾಬಲ ಶೆಟ್ಟಿ ಅವರಿಗೆ ಈ ಅಪಘಾತದಲ್ಲಿ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
