ಮಂಗಳೂರು: ಗೋವಾ ಕಾನಕೋಣ ಸಮೀಪದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋ ತ್ತಮ ಮಠ ಸ್ಥಾಪನೆಯ 550 ವರ್ಷಗಳ ಸಾರ್ಧ ಪಂಚ ಶತಮಾನೋತ್ಸವ ಕಾರ್ಯ ಕ್ರಮವನ್ನು ನ.27ರಿಂದ ಡಿ.7ರವರೆಗೆ ಆಯೋಜಿಸಲಾಗಿದೆ. ಮಠದ ಆವರಣ ಪ್ರವೇಶಿಸುತ್ತಿದ್ದಂತೆಯೇ ಬಿಲ್ಲಿನ ಆಕಾರದ ಜಾಗದಲ್ಲಿ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ನ.28ರಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸ ಲಿದ್ದಾರೆ,” ಎಂದು ಸಂಘಟನಾ ಸಮಿತಿ ಸಂಚಾಲಕ ಪ್ರದೀಪ್ ಜಿ.ಪೈ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ನ.28ರಂದು ಬೆಳಗ್ಗೆ 11 ಗಂಟೆಗೆ ಶ್ರೀ ವಿದ್ಯಾಧಿ ಹ ಶ್ರೀಪಾದ ವಡೇಶ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿದ್ದು, ಸಂಜೆ 3.45ಕ್ಕೆ ಮಠದ ಆವರಣ ದಲ್ಲಿ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ,” ಎಂದು ಸಂಘಟನಾ ಸಮಿತಿ ಜಂಟಿ ಸಂಚಾಲಕ ಮುಕುಂದ್ ಕಾಮತ್ ತಿಳಿಸಿದರು.
ಇದೇ ಸಂದರ್ಭ ಪ್ರಧಾನಿ ಮೋದಿಯವರು ರಾಮಾಯಣ ಥೀಮ್ ಪಾರ್ಕ್, 3ಡಿ ಪ್ರೊಜೆಕ್ಷನ್ ಅನಾವರಣಗೊಳಿಸಿ, ದೇವರ ದರ್ಶನ ಮಾಡಿ ಮಾತನಾಡಲಿದ್ದಾರೆ. ಸಾರಸ್ವತ ಸಮಾಜದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಗುಜರಾತ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಿಸಿದ ಪದ್ಮಶ್ರೀ ರಾಮ್ ವಿ. ಸುತಾರ್ ಅವರು ರಾಮನ ಪ್ರತಿಮೆ ನಿರ್ಮಿಸಿದ್ದು, ಇದು ದಕ್ಷಿಣ ಭಾರತದಲ್ಲೇ ಅತೀ ಎತ್ತರದ ರಾಮನ ಪ್ರತಿಮೆಯಾಗಲಿದೆ ಎಂದರು.
