ಕಳೆದ ನಾಲ್ಕು ದಿನಗಳಿಂದ ದೇಶಾದ್ಯಂತ ಇಂಡಿಗೋ ವಿಮಾನ ಸಂಸ್ಥೆಯ ವಿಮಾನಗಳ ಹಾರಾಟದಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ.
ದೇಶದಾದ್ಯಂತ ದಿನ ಸುಮಾರು 500 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಪೈಲಟ್ ಗಳ ಮುಷ್ಕರ, ಪೈಲಟ್ ಗಳ ಜೊತೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಇಂಡಿಗೋ ಆಡಳಿತಂಡಳಿ ವಿಫಲವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬೇಸತ್ತಿದ್ದಾರೆ.
ವಿಮಾನಗಳ ಹಾರಾಟದಲ್ಲಿ ವ್ಯತ್ಯಯದಿಂದಾಗಿ ದೇಶದಾದ್ಯಂತ ಏರ್ ಪೋರ್ಟ್ಗಳು ತುಂಬಿ ತುಳುಕುತ್ತಿದ್ದು ರೈಲ್ವೆ ನಿಲ್ದಾಣದಂತಾಗಿವೆ.
ತುರ್ತು ಕಾರಣಕ್ಕಾಗಿ ಪ್ರಯಾಣಿಸುವ ಪ್ರಯಾಣಿಕರ ಗೋಳು ಹೇಳತೀರದಾಗಿದ್ದು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಂದೆಯ ಅಂತ್ಯಕ್ರಿಯೆಗೆ ಹೋಗಲಾರದೆ ಅಳುತ್ತಿದ್ದ ಯುವಕನ ಗೋಳು ಹೇಳತೀರದಾಗಿದೆ.
ಅಲ್ಲದೆ ಬೇಸತ್ತ ಪ್ರಯಾಣಿಕರ ಪ್ರತಿಭಟನೆಗಳು ಕೂಡ ನಡೆಯುತ್ತಿದ್ದು, ಜನ ಹೈರಾಣಾಗಿದ್ದಾರೆ .
