ಮಂಗಳೂರು: ನಗರದ ಕೋರ್ಟ್ ರಸ್ತೆಯಲ್ಲಿ ತೂರಾಡುತ್ತಾ ಸಾಗುತ್ತಿದ್ದ ಯುವಕನೋರ್ವನನ್ನು ಗಾಂಜಾ ಸೇವನೆ ಮಾಡಿದ ಆರೋಪದಡಿ ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರು ಅಂದ್ರಹಳ್ಳಿಯ 10ನೇ ಕ್ರಾಸ್ ನಿವಾಸಿ ದರ್ಶನ್ (25) ಎಂದು ಗುರುತಿಸಲಾಗಿದೆ
ಬಂದರು ಠಾಣೆಯ ಎಸ್ಸೈ ಕೋರ್ಟ್ ರಸ್ತೆಯಲ್ಲಿ ವಾಹನದಲ್ಲಿ ಸಾಗುತ್ತಿರುವಾಗ ತೂರಾಡುತ್ತಾ ಸಾಗುತ್ತಿದ್ದ ಯುವಕನೋರ್ವನನ್ನು ನಿಲ್ಲಿಸಿ ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
