ಮಂಗಳೂರು : ಪ್ರಸ್ತುತ ನಡೆಯುತ್ತಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಭಾಗವಾಗಿ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಅನುಭವದ ಪ್ರಯಾಣವನ್ನು ಪ್ರಾರಂಭಿಸಿದೆ.
ಈ ಸವಾರಿ ಮಂಗಳೂರಿನ ಸುಂದರವಾದ ಭೂದೃಶ್ಯದ ವಿಶಿಷ್ಟ ನೋಟವನ್ನು ಜನರಿಗೆ ಉಣಬಡಿಸಲಿದೆ.ಹೆಲಿಕಾಪ್ಟರ್ ಹಾರಾಟದ ಅವಧಿಯು ಆರರಿಂದ ಏಳು ನಿಮಿಷಗಳವರೆಗೆ ಇರುತ್ತದೆ. ನಗರದ ದೃಶ್ಯವು ಗಗನಚುಂಬಿ ಕಟ್ಟಡಗಳು, ಹಸಿರು ಹಾಸಿನ ನಡುವೆ ಸಾಗುವ ಸುಂದರವಾದ ರೈಲ್ವೆ ಹಳಿಗಳು ಮತ್ತು ಕರಾವಳಿಯ ವಿಹಂಗಮ ನೋಟವನ್ನು ಕಟ್ಟಿಕೊಡಲಿದೆ. ಹಸಿರು ಪ್ರದೇಶಗಳು, ಕಡಲತೀರದಲ್ಲಿ ಸಾಲುಗಟ್ಟಿನಿಂತ ದೋಣಿಗಳ ದೃಶ್ಯ ಅದರ ಆಕರ್ಷಣೆಯನ್ನು ಹೆಚ್ಚಿಸಲಿವೆ.
ಪ್ರತಿ ವ್ಯಕ್ತಿಗೆ 3500 ರೂ. ದರ ನಿಗಧಿಯಾಗಿದ್ದು, ಪ್ರತೀ ಪ್ರಯಾಣದಲ್ಲಿ 5 ಸದಸ್ಯರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ಹಾರಾಟದ ಅವಧಿ ಸುಮಾರು 7 ನಿಮಿಷಗಳು ಆಗಿದ್ದು, ಬೆಳಗ್ಗೆ 10:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆಯವರೆಗೆ ಸವಾರಿಗಳು ಲಭ್ಯವಿರುತ್ತದೆ.ದೈನಂದಿನ ಒತ್ತಡಕ್ಕೆ ಸಣ್ಣ ವಿರಾಮ ಕೊಟ್ಟು, ಹೆಲಿಕಾಪ್ಟರ್ ರೈಡ್ನಲ್ಲಿ ಕರಾವಳಿ ಸೌಂದರ್ಯದ ವಿಹಂಗಮ ಚಿತ್ರಣವನ್ನು ಕಣ್ತುಂಬಿಕೊಳ್ಳಲು ಇರುವ ಒಂದೊಳ್ಳೆ ಅವಕಾಶ. ಹೆಲಿಕಾಪ್ಟರ್ ಪ್ರಯಾಣದಿಂದ ಹೆಲಿಕಾಪ್ಟರ್ ಸಂಚಾರವು ನಗರದ ಸುಲ್ತಾನ್ ಬತ್ತೇರಿಯಿಂದ ಆರಂಭವಾಗಲಿದೆ. ಮಂಗಳೂರಿನ ಕಡಲ ಕಿನಾರೆ, ರಮಣೀಯ ತಾಣಗಳನ್ನು ಹಾಗೂ ಕರಾವಳಿಯ ಭೂದೃಶ್ಯದ ವಿಶಾಲ ನೋಟ ಆನಂದಿಸಬಹುದು…
